Publish Date: Sat, 11 Nov 2023 (14:20 IST)
Updated Date: Sat, 11 Nov 2023 (14:40 IST)
ನಗರದ ರೈಲ್ವೆ ನಿಲ್ದಾಣಗಳು ಪ್ರಯಾಣಿಕರಿಂದ ತುಂಬಿ ತುಳುಕುತ್ತಿದ್ದಾರೆ.ದೀಪಾವಳಿ ಹಬ್ಬದ ಪ್ರಯಕ್ತ ತಮ್ಮ ಊರುಗಳಿಗೆ ಪ್ರಯಾಣಿಕರು ತೆರಳುತ್ತಿದ್ದಾರೆ.ರೈಲುಗಳಲ್ಲಿ ಸೀಟು ಸಿಗದೇ ಡೋರಿನಲ್ಲಿ ನಿಂತು ಪ್ರಯಾಣಿಕರ ಪ್ರಯಾಣ ಮಾಡಿದ್ದಾರೆ.ಸೀಟಿಗಾಗಿ ಪ್ರಯಾಣಿಕರು ವಾಗ್ವಾದ ಮಾಡಿಕೊಳ್ಳುತ್ತಿದ್ದಾರೆ.ಮೈಸೂರಿನಿಂದ ಮಹಾರಾಷ್ಟ್ರದ ಪಂಢರಪುರಕ್ಕೆ ಹೋಗುವ ಗೋಲ್ ಗುಂಬಜ್ ರೈಲು ಫುಲ್ ರಶ್ ಆಗಿದೆ.
ಉತ್ತರ ಕರ್ನಾಟಕ ಭಾಗದ ಪ್ರಯಾಣಿಕರು ಅತಿಹೆಚ್ಚು ರೈಲಿನಲ್ಲಿ ಪ್ರಯಾಣಿಸುತ್ತಾರೆ.ಹೀಗಾಗಿ ಉತ್ತರ ಕರ್ನಾಟಕ ಭಾಗದ ಕಡೆಗೆ ಹೋಗುವ ರೈಲುಗಳು ಫುಲ್ ರಶ್ ಆಗಿದೆ.