Select Your Language

Notifications

webdunia
webdunia
webdunia
Tuesday, 8 April 2025
webdunia

ಬೆಂಗಳೂರಿನ 60 ಜಾಗದಲ್ಲಿ ಮಾತ್ರ ಪಟಾಕಿ ಮಾರಾಟಕ್ಕೆ ಅವಕಾಶ

ಪಟಾಕಿ ಮಾರಾಟ
bangalore , ಶನಿವಾರ, 11 ನವೆಂಬರ್ 2023 (21:02 IST)
ಸಾಲು ಸಾಲು ಪಟಾಕಿ ದುರಂತಗಳ ಹಿನ್ನಲೆ ಬಿಬಿಎಂಪಿ ಎಚ್ಚೇತ್ತುಕೊಂಡಿದೆ.ಈ ಬಾರಿ ಕಟ್ಟುನಿಟ್ಟಾಗಿ ಬಿಬಿಎಂಪಿ ರೂಲ್ಸ್ ಪಾಲಿಸಿದೆ.ಪೊಲೀಸ್ ಇಲಾಖೆ, ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಅಗ್ನಿಶಾಮಕ ದಳ ಹೆಚ್ಚಿನ ನಿಗಾವಹಿಸಿದೆ.ಪ್ರತಿ ವರ್ಷ ಬೆಂಗಳೂರಿನಲ್ಲಿ ನೂರಾರು ಜಾಗದಲ್ಲಿ ಪಟಾಕಿ ಮಾರಾಟ‌ ಅವಕಾಶ ವಿತ್ತು .ಆದರೆ ಈ ಬಾರಿ ಕೇವಲ 60 ಜಾಗದ ಮೈದಾನದಲ್ಲಿ ಮಾತ್ರ ಪಟಾಕಿ ಮಾರಾಟಕ್ಕೆ ಅವಕಾಶ ಇದೆ.

ದೀಪಾವಳಿ ಸಂದರ್ಭದಲ್ಲಿ ರಾತ್ರಿ 8 ರಿಂದ 10 ಗಂಟೆವರೆಗೂ ಮಾತ್ರ ಪಟಾಕಿ‌ ಸಿಡಿಸಲು ಅವಕಾಶ ಇದೆ.ಹಗಲು ಹೊತ್ತಿನಲ್ಲಿ ಪಟಾಕಿ ಸಿಡಿಸುವಂತಿಲ್ಲ.ಹಸಿರು ಪಟಾಕಿ ಹೊರತುಪಡಿಸಿ ಬೇರೆ ಪಟಾಕಿ ಸಿಡಿಸಿದ್ರೆ ಕ್ರಿಮಿನಲ್ ಕೇಸ್ ಹಾಕಲಾಗುತ್ತೆ.ಕಾರ್ಯ ಪಡೆಗಳನ್ನ ರಚಿಸಿರುವ ಮಾಲಿನ್ಯ ನಿಯಂತ್ರಣ ಮಂಡಳಿ ಬೆಸ್ಕಾಂ, ಅಗ್ನಿಶಾಮಕ ದಳ, ಸ್ಥಳೀಯ ಪೊಲೀಸ್, ಬಿಬಿಎಂಪಿ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳನ್ನ ಒಳಗೊಂಡು ಅಕ್ರಮ ದಾಸ್ತಾನು, ಹಸಿರು ಪಟಾಕಿ ಹೊರತುಪಡಿಸಿ ಅನ್ಯಪಟಾಕಿ ಮೇಲೆ ನಿಗಾ ಇಟ್ಟಿದೆ.
 
ರಾಜಾಜಿನಗರ ನವರಂಗ ಥೇಟರ್ ಹತ್ತಿರದ KLE ಗ್ರೌಂಡ್ ನಲ್ಲಿ ಜೋರು ಮಾರಾಟ ಮಾಡಲಾಗ್ತಿದೆ.ಬಿಬಿಎಂಪಿ ಇಂದ ಪರಿಶೀಲನೆ ಮಾಡಲಾದ ಗ್ರೀನ್ ಪಟಾಕಿ ಮಾರಾಟ ಮಾಡಲಾಗುತ್ತಿದೆ.ಪಟಾಕಿ ಅಂಗಡಿಗಳ ಮೇಲೆ ಬಿಬಿಎಂಪಿ ಅಧಿಕಾರಿಗಳಹ ನಿಗಾ ಇಟ್ಟಿದ್ದಾರೆ.ಪಟಾಕಿ ಖರೀದಿ ಮಾಡೋಕೆ ಕುಟುಂಬ ಸಮೇತವಾಗಿ ಜನ ಆಗಮಿಸುತ್ತಿದ್ದಾರೆ.ಇವತ್ತಿನಿಂದ ಮೂರುದಿನಗಳ ಕಾಲ ಬಿಬಿಎಂಪಿ ನಿಗದಿ ಮಾಡಿದ ಸ್ಥಳದಲ್ಲಿ ಪಟಾಕಿ ಮಾರಾಟಕ್ಕೆ ಅನುಮತಿ ನೀಡಿದೆ.ಅನುಮತಿ ಇರೋ ಅಂಗಡಿ ಮಾಲೀಕರಿರು ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇದು ಅಧಿಕಾರ ಅಲ್ಲ,ಜವಾಬ್ದಾರಿ ಕೇಳಿ ತಗೊಳುವ ಹುದ್ದೆಯಲ್ಲ- ಸಿಟಿ ರವಿ