Select Your Language

Notifications

webdunia
webdunia
webdunia
webdunia

ಐತಿಹಾಸಿಕ ಕರಗದ ಮೇಲೆ ಕಿಡಿಗೆಡಿಗಳ ಕರಿ ನೆರಳು..!

The black shadow of the sparks on the historical thaw
bangalore , ಗುರುವಾರ, 13 ಏಪ್ರಿಲ್ 2023 (20:30 IST)
ಬೆಂಗಳೂರಿನ ಐತಿಹಾಸಿಕ ಕರಗ ವೇನೂ ಸುಸೂತ್ರವಾಗಿ ನೇರವೇರಿದೆ, ಆದರೆ ಚೈತ್ರ ಪೂರ್ಣಿಮೆಯಾ ಬೆಳದಿಂಗಳ ರಾತ್ರಿಯಲ್ಲಿ ಕರಗಕ್ಕೆ ಕಪ್ಪು ಮಸಿ ಬಿಳಿಯಲು ಸ್ಕೆಚ್ ಹಾಕಿದ್ದು ಮಾತ್ರ ತಡವಾಗಿ ಬೆಳಕಿಗೆ ಬಂದಿದೆ,ಎಲ್ಲರೂ ಸಂಭ್ರಮದಲ್ಲಿದಾಗ ಭಕ್ತರ ಸೊಗಿನಲ್ಲಿ ಬಂದ ಆರೋಪಿ ನಡೆಸಿದ ಕೃತ್ಯ ಬಯಲಿಗೆಳೆಯಲಾಗಿದೆ. 
 
 ವಿಶ್ವ ವಿಖ್ಯಾತ ಐತಿಹಾಸಿಕ ಕರಗ, ಯಾವುದೇ ಅಡ್ಡಿ ಇಲ್ಲದೆ ಸುಸೂತ್ರವಾಗಿ ಮತ್ತು ಕರಗ ಮಹೋತ್ಸವ  ವಿಜ್ರುಂಭಣೆಯಿಂದ ನಡೆದಿತ್ತು.ಇದಕ್ಕಾಗಿ ಪೊಲೀಸ್ ಸರ್ಪಗಾವಲಿನಿಂದ ಮತ್ತು  ಬಿಬಿಎಂಪಿ ಇಲಾಖೆ, ಹಾಗೂ ಬೆಂಗಳೂರು ನಗರ ಜಿಲ್ಲಾಡಳಿತಗಳಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ಹದ್ದಿನ ಕಣ್ಣಿಟ್ಟಿತ್ತು, ಆದರೂ ಕೂಡ ಇಂತಹ ಆರೋಪಿಗಳು ಭಕ್ತರ ಸೊಬಗಿನಲ್ಲಿ ಬಂದು ಕೃತ್ಯ ವೆಗಿದ್ದಾರೆ,ಅದೇನೇ ಇರಲಿ ಕರಗಕ್ಕೆ ಕಪ್ಪು ಮಸಿ ಬಳಿ ಬಳಿಯಲು ಬಂದಿದ್ದ ಆರೋಪಿಯನ್ನು ಹಿಡಿದು ಈಗಾಗಲೇ ತನಿಖೆ ಕೂಡ ನಡೆಯುತ್ತಿದೆ.  ಅದೃಷ್ಟವಶಾತ್ ಕರಗಕ್ಕೆ ಕಪ್ಪು ಮಸಿ ಬಳಿಯಲು ಭಕ್ತರ ಸೊಬಗಿನಲ್ಲಿ ಬಂದ ಆರೋಪಿ ಕೃತ್ಯ ವೆಸಗಿದ್ದರು ಕೂಡ ತಾಯಿಯಾ ಆಶೀರ್ವಾದದಿಂದ ಅಂದು ಯಾರಿಗೂ ಏನು ಆಗದೆ ಕರಗ ಸುಸೂತ್ರವಾಗಿ ನೆರೆವರಿತ್ತು,ನಂತರ ಕರಗದ ವೇಳೆ ನಡೆದಿದ್ದ ಕೃತ್ಯ ಮರುದಿನ ಬೆಳಕಿಗೆ ಬಂದಿದೆ.ಮುಂದಿನ ದಿನಗಳಲ್ಲಿ ಸತ್ಯ ಸತ್ಯತೆ ತಿಳಿಯಲ್ಲಿದೆ ಎನ್ನುತ್ತಾರೆ ಟ್ರಸ್ಟ್ ನಾ ಅಧ್ಯಕ್ಷರು 
 
ಬೆಂಗಳೂರು ಧರ್ಮರಾಯಸ್ವಾಮಿ ದ್ರೌಪದಿ ಕರಗ ಉತ್ಸವವನ್ನು ಕಣ್ ತುಂಬಿಕೊಳ್ಳಲು ಭಕ್ತ ಸಾಗರವೇ ಹರಿದಿತ್ತು,ಇಂತಹ ಭಕ್ತರ ನೆಪದಲ್ಲಿ ಬಂದ ಆರೋಪಿ ಕರಗ ಹೊತ್ತ ಪೂಜಾರಿ ಜ್ಞಾನೇಂದ್ರ ಅವರಿಗೆ ಹೂ ಎರಚುವ ಬದಲು ಕರದ ಪುಡಿ ಕೆಮಿಕಲ್ ಎರಚಿರುವ ಘಟನೆ ಈಗ ಬೆಳಕಿಗೆ ಬಂದಿದೆ,ಅದೃಷ್ಟವಶಾತ್ ತಾಯಿ ಮೈಮೇಲೆ ಇದ್ದ ಕಾರಣ ಕಾರದ ಪುಡಿ ಎರಚ್ಚಿದ್ದರು ಕೂಡ  ಪೂಜಾರಿಗೆ ಅಂದು ಏನು ಆಗಿಲ್ಲಾ, ಇದು ತಾಯಿ ಪವಾಡ ಅನುತ್ತಾರೆ ಟ್ರಸ್ಟ್ ನ ಅಧ್ಯಕ್ಷ ಸತೀಶ್ 
 
ಒಟ್ಟಾರೆ ಇಷ್ಟು ವರ್ಷದಿಂದ ನಡೆದುಕೊಂಡು ಬಂದಿರುವ ಕರಗ ಉತ್ಸವಕ್ಕೆ ಇದೇ ಮೊದಲ ಬಾರಿಗೆ ಇಂತಹ ಅಹಿತಕರ ಘಟನೆ ನಡೆದಿರುವುದು ಈ ಘಟನಗೆ ಸಂಭಂದಿಸಿದಂತೆ ಈಗಾಗಲೇ ಹಲಸೂರು ಪೊಲೀಸ್ ಠಾಣೆಯಲ್ಲಿ ತನಿಖೆ ನಡೆಯುತ್ತಿದೆ ಜೊತೆಗೆ ಈ ಕೃತ್ಯ ಕ್ಕೆ ಸಂಭಂಸಿದಂತೆ ಆಧಿನಾರಯಣ್ ಎಂಭ ವ್ಯಕ್ತಿಯ ಮೇಲೆ ಶಂಕೆ ಬಂದಿರುವುದರಿಂದ  ತನಿಖೆ ಕೂಡ  ನಡೆಯುತ್ತಿದೆ,ಮುಂದಿನ ದಿನಗಳಲ್ಲಿ ಎಲ್ಲವೂ ಬೆಳಕಿಗೆ ಬರಲಿದೆ ಯಾರು ಕೂಡ ಅಪಪ್ರಚಾರ ಮಾಡಬಾರದೆಂದು ಮಾಧ್ಯಮದವರಿಗೆ ಸತೀಶ್ ಮನವಿ ಮಾಡಿದ್ದಾರೆ. 
 
 

Share this Story:

Follow Webdunia kannada

ಮುಂದಿನ ಸುದ್ದಿ

ರಂಗೇರಿದ ಚುನಾವಣಾ ಅಖಾಡ - ಚುನಾವಣೆಗೆ ಬಿ ಫಾರಂ ಪಡೆದ ಕೇಸರಿಕಲಿಗಳು