Select Your Language

Notifications

webdunia
webdunia
webdunia
webdunia

ಬಿಜೆಪಿ ಪರ ಪ್ರಚಾರ ನಡೆಸಲು ಬಂದಿದೆ ಐದು ರಾಜ್ಯಗಳಿಂದ 40 ಮಂದಿಯ ತಂಡ

ಬಿಜೆಪಿ
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಪರವಾಗಿ ಕೆಲಸ ಮಾಡಲು ಐದು ರಾಜ್ಯಗಳಿಂದ 40 ಮಂದಿ ಪ್ರಧಾನ ಕಾರ್ಯದರ್ಶಿಗಳ ತಂಡ ರಾಜ್ಯದಲ್ಲಿ ಠಿಕಾಣಿ ಹೂಡಿದೆ.
 
ಬಿಜೆಪಿ ಪರವಾಗಿ ಸದ್ದಿಲ್ಲದೇ ಪ್ರಚಾರ ಮಾಡುವ ಈ ತಂಡ ಚುನಾವಣೆ ಮುಗಿಯುವವರೆಗೆ ರಾಜ್ಯದಲ್ಲೇ ಇರಲಿದೆ. ಉತ್ತರಪ್ರದೇಶ, ಉತ್ತರಾಖಂಡ್ ಹಾಗೂ ಹಿಮಾಚಲ ಪ್ರದೇಶದಲ್ಲಿ ಪ್ರಚಾರ ನಡೆಸಿದ ವೃತ್ತಿಪರ ತಂಡವನ್ನೇ ರಾಜ್ಯಕ್ಕೆ ಅಮಿತ್ ಶಾ ಕಳುಹಿಸಿದ್ದಾರೆ.
 
ಒಂದು ವಾರದ ಹಿಂದೆಯೇ ರಾಜ್ಯಕ್ಕೆ ಬಂದಿರುವ ಈ ತಂಡ ಉತ್ತರ, ದಕ್ಷಿಣ , ಮಧ್ಯ ಕರಾವಳಿ ಭಾಗಗಳಲ್ಲಿ ಹತ್ತು ಮಂದಿಯಂತೆ ನಾಲ್ಕು ತಂಡಗಳಾಗಿ ವಿಭಜನೆಗೊಂಡು ಕಾರ್ಯನಿರ್ವಹಿಸುತ್ತಿದೆ. ಅಮಿತ್ ಶಾ ಜೊತೆಗೆ ನಿಕಟ ಸಂಪರ್ಕದಲ್ಲಿರುವ ಈ ತಂಡ ಅಭ್ಯರ್ಥಿಗಳ ಆಯ್ಕೆ, ಪ್ರಚಾರದ ವಿಧಾನ ಸೇರಿದಂತೆ ಹಲವು ವಿಷಯಗಳಲ್ಲಿ ಮಾರ್ಗದರ್ಶನ ಮಾಡಲಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದಲ್ಲಿ ಕಾಂಗ್ರೆಸ್‌ನ್ನು ಬಿಜೆಪಿ ಕಿತ್ತು ಬಿಸಾಡಲಿದೆ– ಅಮಿತ್ ಶಾ