Webdunia - Bharat's app for daily news and videos

Install App

ಹತ್ತು ರೂ. ನಿಂದ ಲಕ್ಷ ಲಕ್ಷ ದೋಚುತ್ತಿದ್ದ ಕುಖ್ಯಾತ ಓಜಿಕುಪ್ಪಂ ಗ್ಯಾಂಗ್‍ನ ಇಬ್ಬರು ಕಳ್ಳರ ಬಂಧನ

Webdunia
ಶುಕ್ರವಾರ, 21 ಡಿಸೆಂಬರ್ 2018 (07:23 IST)
ಚಿಕ್ಕಬಳ್ಳಾಪುರ : ರಸ್ತೆಯಲ್ಲಿ ಹತ್ತು ರೂ. ಬಿಸಾಕಿ ಅಮಾಯಕರಿಂದ ಲಕ್ಷ ಲಕ್ಷ ದೋಚುತ್ತಿದ್ದ ಕುಖ್ಯಾತ ಓಜಿಕುಪ್ಪಂ ಗ್ಯಾಂಗ್‍ನ ಇಬ್ಬರು ಕಳ್ಳರನ್ನು ಚಿಕ್ಕಬಳ್ಳಾಪುರ ಪೊಲೀಸರು ಬಂಧಿಸಿದ್ದಾರೆ.

ರಾಜೇಶ್, ಶಣ್ಮುಗಂ ಬಂಧಿತ ಆರೋಪಿಗಳು. ಈ ಗ್ಯಾಂಗ್ ನವರು ರಸ್ತೆಯಲ್ಲಿ 10, 20 ರೂಪಾಯಿ ಬಿಸಾಡಿ ನಿಮ್ಮ ದುಡ್ಡು ಬಿದ್ದಿದೆ ನೋಡಿ ಎಂದು ಅವರ ಗಮನ ಬೇರೆಡೆ ಸೆಳೆದು ಹಣ ಎಗರಿಸುತ್ತಿದ್ದರು, ಎ.ಟಿ.ಎಂ, ಬ್ಯಾಂಕ್, ಎ.ಪಿ.ಎಂ.ಸಿ ಮಾರುಕಟ್ಟೆಗಳಲ್ಲಿ ಬರುವ ಸಾಮಾನ್ಯ ಜನರನ್ನು ಟಾರ್ಗೆಟ್ ಮಾಡಿ, ಹಣ ದೋಚುತ್ತಿದ್ದರು. ಈ ಓಜಿಕುಪ್ಪಂ ಜಾಲ ಇತ್ತೀಚೆಗೆ ಆಂಧ್ರ, ಕರ್ನಾಟಕ ಗಡಿನಾಡು ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಚಿಂತಾಮಣಿ, ಚಿಕ್ಕಬಳ್ಳಾಪುರ ಗೌರಿಬಿದನೂರು, ಬಾಗೇಪಲ್ಲಿ ಗುಡಿಬಂಡೆ ಹಾಗೂ ಆಂಧ್ರದ ಗೊರಂಟ್ಲದಲ್ಲಿ ಹೆಚ್ಚು ಆಕ್ವೀವ್ ಆಗಿತ್ತು.

 

ಈ ಗ್ಯಾಂಗ್ ನ ರಾಜೇಶ್, ಶಣ್ಮುಗಂ ಇತ್ತೀಚೆಗೆ ಚಿಕ್ಕಬಳ್ಳಾಪುರ ನಗರದಲ್ಲಿ ತಮ್ಮ ಕೈಚಳಕ ತೋರಿ ಕೊಳವನಹಳ್ಳಿ ನಿವಾಸಿ ಜಯರಾಮಯ್ಯ ಹಾಗೂ ರತ್ನಮ್ಮ ದಂಪತಿಯ  ಮೂರುವರೆ ಲಕ್ಷ ರೂ ಹಣ ಕೊಳ್ಳೆಹೊಡೆದ ಕಾರಣ ಅವರು  ಚಿಕ್ಕಬಳ್ಳಾಪುರ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರಿನ್ವಯ ಪೊಲೀಸರು ಆರೋಪಿಗಳು ಬಳಸಿದ್ದ ಮೊಬೈಲ್ ಗಳ ಮೂಲಕ ಟ್ರೇಸ್ ಮಾಡಿ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ. ಸದ್ಯ ಬಂಧಿತ ಆರೋಪಿಗಳಿಂದ 11.80 ಲಕ್ಷ ರೂ, 2 ಬೈಕ್ ಜಪ್ತಿ ಮಾಡಿದ್ದ ಪೊಲೀಸರು  ಹಣ ಕಳೆದುಕೊಂಡ ಸಾಮಾನ್ಯ ಜನರಿಗೆ ಮರಳಿ ಹಣ ಸಿಗುವಂತೆ ಮಾಡಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 

 

 

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments