Publish Date: Mon, 06 Jun 2022 (14:31 IST)
Updated Date: Mon, 06 Jun 2022 (15:32 IST)
ಬೆಂಗಳೂರು : ಅನುಭವ ಮಂಟಪ ದಾಖಲೆಗಳನ್ನು ಪುರಾತತ್ವ ಇಲಾಖೆ ಪರಿಶೀಲಿಸಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಭರವಸೆ ಕೊಟ್ಟರು.
ಅನುಭವ ಮಂಟಪ ಇರುವ ಜಾಗದ ಸಂರಕ್ಷಣೆ, ಸಂಶೋಧನೆಗೆ ಸ್ವಾಮೀಜಿಗಳಿಂದ ಒತ್ತಾಯ ವಿಚಾರವಾಗಿ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ ಅವರು, ಸ್ವಾಮೀಜಿಗಳು ಅನುಭವ ಮಂಟಪದ ಕುರಿತು ಭಾನುವಾರ ಮನವಿ ಮಾಡಿದ್ದಾರೆ.
ಈ ವೇಳೆ ಕೆಲವು ದಾಖಲೆಗಳನ್ನೂ ಕೊಟ್ಟಿದ್ದಾರೆ. ಎಲ್ಲ ದಾಖಲೆಗಳನ್ನು ಪುರಾತತ್ವ ಇಲಾಖೆ ಪರಿಶೀಲಿಸಲಿದೆ ಎಂದು ತಿಳಿಸಿದರು.