Select Your Language

Notifications

webdunia
webdunia
webdunia
webdunia

ಫೇಸ್ ಬುಕ್ ವರೆಗೂ ಬಂತು ನಟಿಯ ಫ್ಯಾಮಿಲಿ ಮ್ಯಾಟರ್..!

The actress's family matter that came up on Facebook
bangalore , ಗುರುವಾರ, 12 ಆಗಸ್ಟ್ 2021 (20:59 IST)
ಬೆಂಗಳೂರು : ಗಂಡ ಹೆಣ್ತಿ ಜಗಳ ಉಂಡು ಮಲಗೋಗುವ ತನಕ ಅಂತಾ ಒಂದು ಮಾತಿದೆ.. ಆದ್ರೆ ಈ ಗಂಡ ಹೆಣ್ತಿ ಜಗಳ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡ್ತಿದೆ.. ಆಕೆ ಸಿನಿಮಾದಲ್ಲಿ ನಟನೆ ಶುರು ಮಾಡಿರೋ ಮಾಡೆಲ್.. ಆದ್ರೆ ತನ್ನ ಪತಿ ಬೇರೊಂದು ಯುವತಿಯ ಜೊತೆ ಗೆಳೆತನ ಬೆಳಸಿಕೊಂಡಿದ್ದಾನೆ ಅಂತಾ ತನ್ನ ಫ್ಯಾಮಿಲಿ ಮ್ಯಾಟರನ್ನ ಸೋಷಿಯಲ್ ಮೀಡಿಯಾಗಂಟ ತಂದಿದ್ದಾಳೆ.. ಅಷ್ಟೇ ಅಲ್ಲ.. ಆ ಯುವತಿಯ ಜೊತೆ ಫೇಸ್ ಬುಕ್ ನಲ್ಲೇ ಮಾತಿನ ಯುದ್ದಕ್ಕೆ ಇಳಿದಿದ್ಳು. ಹೌದು, ಆಕೆ ಒಬ್ಬ ನಟಿ, ಮಾಡೆಲ್, ತಾನೂ ಸಿನಿಮಾರಂಗದ ಮೂಲಕ ಜನರಿಗೆ ಮನರಂಜನೆ ಕೊಡ್ಬೇಕು ಅಂದ್ಕೊಂಡಿದ್ದ ನಟಿ.. ಅದ್ರಂತೆ ಕೆಲ ಸಿನಿಮಾಗಳಲ್ಲೂ ನಟಿಸಿದ್ಳು.ಆದ್ರೆ ಸಿನಿಮಾಗಿಂತ್ಲೂ ತನ್ನ ಫ್ಯಾಮಿಲಿ ಮ್ಯಾಟರ್ ನಿಂದಲೇ ಆ ನಟಿ ಸದ್ದು ಮಾಡ್ತಿದ್ದಾಳೆ. ಈ ಪೋಟೋದಲ್ಲಿರೋ ಈಕೆಯೆ ನಟಿ.. ಹೆಸ್ರು ರಾಧಿಕಾ ರಾಮ್ ಅಂತಾ.. ಮಾಡೆಲಿಂಗ್ ಕ್ಷೇತ್ರದಲ್ಲಿ ಹೆಸರು ಮಾಡಿದ್ದ ರಾಧಿಕಾ ರಾಮ್ ಸಿನಿಮಾ ರಂಗಕ್ಕೂ ಎಂಟ್ರಿ ಕೊಟ್ಟಿದ್ದಾರೆ. ಮೋನಿಕಾ ಈಸ್ ಮಿಸ್ಸಿಂಗ್ ಅನ್ನೋ ಚಿತ್ರದಲ್ಲೂ ನಟಿಸಿದ್ದಾರೆ. ಆದ್ರೆ ಸಿನಿಮಾದಿಂದ ಸುದ್ದಿಯಾಗದ ನಟಿ ತಮ್ಮ ಮನೆಯ ಜಗಳದ ವಿಚಾರಕ್ಕೆ ಸುದ್ದಿಯಾಗ್ತಿದ್ದಾಳೆ. ಅದೇನು ಅಂತಾ ಹೇಳ್ತೀವಿ ಅದ್ಕಿಂತ ಮೊದ್ಲು ಈ ವಿಡಿಯೋ‌ ನೋಡಿ.ಈ ವಿಡಿಯೋದಲ್ಲಿರೋ ಆ ವ್ಯಕ್ತಿ  ನಟಿ ರಾಧಿಕಾ ರಾಮ್ ಪತಿ.  ಯುವತಿ ಪ್ರತಿಕಾ ರಾವ್ ಆತನ ಗೆಳತಿ.. ಕೆಲ ವರ್ಷಗಳ ಹಿಂದೆ ರಾಧಿಕಾರನ್ನ ಮದುವೆಯಾಗಿದ್ದ ಆತ ಮದುವೆಯ ನಂತರವೂ ಪ್ರತಿಕಾ ರಾವ್ ಅನ್ನೋ ಯುವತಿಯ ಜೊತೆ ಗೆಳೆತನ ಬೆಳಸಿದ್ದ.. ಈ ಬಗ್ಗೆ  ರಾಧಿಕಾ‌ ಮತ್ತು ಆಕೆಯ ಪತಿ ಇಬ್ಬರೂ ಜಗಳವಾಡಿದ್ರು.. ಅಲ್ಲದೇ ಪ್ರತಿಕಾ ಮತ್ತು ರಾಧಿಕಾ ಮದ್ಯೆಯೂ ಮಾತುಕತೆ ನಡೆದಿತ್ತು.. ಆದ್ರೆ ಇತ್ತೀಚೆಗೆ ನಿನ್ನ ಪತಿ ನನ್ನನ್ನ ಮನೆಗೆ ಕರೆದಿದ್ದಾನೆ ಅಂತಾ ಪ್ರತಿಕಾ ನೇರ ರಾಧಿಕಾ ಮನೆಗೆ ಹೋಗಿದ್ಳು.. ಈ ವೇಳೆ  ಕೋಪಗೊಂಡಿದ್ದ ರಾಧಿಕಾ ಪತಿ ನಾನು ಕರೆದೇ ಇಲ್ಲ..ಸುಳ್ಳು ಹೇಳಿ ಬಂದಿದ್ಯಾ ಅಂತಾ ಪ್ರತಿಕಾ ಮೇಲೆ ಹಲ್ಲೆ ಮಾಡಿದ್ದಾನೆ.. ಅವರ ಜಗಳವನ್ನ ಸ್ವತಃ ನಟಿ ರಾಧಿಕಾ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿದ್ದಾರೆ..
 
 
ಇನ್ನು ಈ‌ ವಿಡಿಯೋ ಸಾಮಾಜಿಕ‌ ಜಾಲತಾಣದಲ್ಲಿ ಫುಲ್ ವೈರಲ್ ಆಗಿದ್ದು, ಮನೆಯ ಜಗಳ ಫೇಸ್ ಬುಕ್‌ಗೆ ಎಂಟ್ರಿ ಕೊಟ್ಟಿದೆ. ಈ ಬಗ್ಗೆ ಫೇಸ್ ಬುಕ್ ನಲ್ಲೇ ಜಗಳ ಶುರು ಮಾಡಿರೋ ರಾಧಿಕಾ -ಪ್ರತಿಕಾ ಇಬ್ಬರೂ ಕಾಂಮೆಂಟ್ ಬಾಕ್ಸ್ ನಲ್ಲಿ ಮಾತಿನ ಯುದ್ದಕ್ಕಿಳಿದಿದ್ದಾರೆ.. ಈ ವಿಡಿಯೋ ಫೇಕ್ ಅಂತಾ ಪ್ರತಿಕಾ ವಾದ ಮಾಡಿದ್ರೆ, ಇಲ್ಲ ನೀನು ನನ್ನ ಗಂಡನ ಜೊತೆ ಸಂಪರ್ಕ ಹೊಂದಿದ್ಯಾ.. ನಮ್ ಮದ್ಯ ಯಾಕ್ ಬಂದೆ ಅಂತಾ ಆರೋಪಿಸಿ ಕಾಮೆಂಟ್ ಮಾಡಿದ್ದಾರೆ. ಸದ್ಯ ಇವರಿಬ್ಬರ ಜಗಲಕ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸುದ್ದಿಯಾಗ್ತಿದೆ. ಏನೆ ಆಗ್ಲಿ ಸಂಸಾರದಲ್ಲಿ ಏನೆ ಬಿರುಕು‌‌ ಬಂದಿದ್ರು ಅದನ್ನ ಅಲ್ಲೇ ಪರಿಹರಿಸಿಕೊಳ್ಳೋದು ಬಿಟ್ಟು ಈ ರೀತಿ ಸೋಷಿಯಲ್ ಮೀಡಿಯಾವರೆಗೆ ತಂದಿದ್ದು ಜನರಿಗೆ ಒಂತರಾ ಎಂಟರ್ಟೈನ್ಮೆಂಟ್ ಕೊಟ್ಟಂಗಿದೆ.ಅದ್ರಲ್ಲೂ ಒಬ್ಬ ನಟಿಯಾಗಿ ರಾಧಿಕಾ ಸೋಷಿಯಲ್ ಮೀಡಿಯಾದಲ್ಲೇ ತಮ್ಮ ವೈಯಕ್ತಿಕ ವಿಚಾರಗಳ‌ ಬಗ್ಗೆ ಮಾತಿಗಿಳಿಯಬಾರದಿತ್ತು.
webdunia

Share this Story:

Follow Webdunia kannada

ಮುಂದಿನ ಸುದ್ದಿ

13 ಜಿಲ್ಲೆಗಳ 61 ತಾಲೂಕುಗಳು ಪ್ರವಾಹ ಪೀಡಿತ ಸರ್ಕಾರ ಘೋಷಣೆ