Select Your Language

Notifications

webdunia
webdunia
webdunia
webdunia

ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
bangalore , ಶುಕ್ರವಾರ, 23 ಡಿಸೆಂಬರ್ 2022 (19:22 IST)
ಪೆರೋಲ್ ಮೇಲೆ ಬಂದು ನಾಪತ್ತೆಯಾಗಿದ್ದ ಅಪರಾಧಿಯನ್ನು 15 ವರ್ಷದ ಬಳಿಕ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಮಂಗಮ್ಮನಪಾಳ್ಯದ ನಿವಾಸಿಯಾಗಿದ್ದ ಮೊಹಮ್ಮದ್ ಸುಹೇಲ್ ಅಲಿಯಾಸ್ ಮೊಹಮ್ಮದ್ ಅಯಾಜ್ 2007ರಿಂದ ನಾಪತ್ತೆಯಾಗಿದ್ದ. ಪೆರೋಲ್ ಮೇಲೆ ಬಂದಿದ್ದ ಸುಹೇಲ್ ಆಯುರ್ವೇದ ಔಷಧ ತಜ್ಞನಾಗಿ ಬದಲಾಗಿದ್ದ. 2004ರಲ್ಲಿ ಸುಹೇಲ್ ಮತ್ತು ಆತನ ಸಹಚರರು ನಿವೃತ್ತ ಸೈನಾಧಿಕಾರಿಯನ್ನು ಕೊಲೆಗೈದ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ. 2007 ಮಾರ್ಚ್​ನಲ್ಲಿ ಪೆರೋಲ್ ಮೇಲೆ ಸುಹೇಲ್ ಜೈಲಿನಿಂದ ಹೊರ ಬಂದಿದ್ದ. ಇತ್ತೀಚೆಗಷ್ಟೇ ಪೆರೋಲ್ ಮೇಲೆ ಹೋಗಿ ನಾಪತ್ತೆಯಾದವರನ್ನು ಬಂಧಿಸುವಂತೆ ನ್ಯಾಯಾಲಯ ಸೂಚನೆ ನೀಡಿತ್ತು. ನ್ಯಾಯಾಲಯದ ಆದೇಶ ಬೆನ್ನಲ್ಲೇ ಮರೆತು ಹೋಗಿದ್ದ ಪ್ರಕರಣವನ್ನು ಕೈಗೆತ್ತಿಕೊಂಡ ಮಡಿವಾಳ ಪೊಲೀಸರು ಸುಹೇಲ್​ನನ್ನು ಬಂಧಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಗು ಜೀವ ಉಳಿಸಿದ ‘ಸುಪ್ರ’ ಡಾಕ್ಟರ್ಸ್​​​