Select Your Language

Notifications

webdunia
webdunia
webdunia
webdunia

ಮಗು ಜೀವ ಉಳಿಸಿದ ‘ಸುಪ್ರ’ ಡಾಕ್ಟರ್ಸ್​​​

ಮಗು ಜೀವ ಉಳಿಸಿದ ‘ಸುಪ್ರ’ ಡಾಕ್ಟರ್ಸ್​​​
bangalore , ಶುಕ್ರವಾರ, 23 ಡಿಸೆಂಬರ್ 2022 (19:19 IST)
ವೈದ್ಯೋ ನಾರಾಯಣ ಹರಿ ಎಂಬ ಮಾತಿದೆ. ದೇವರು ಎಲ್ಲೆಡೆ ಇರಲು ಸಾಧ್ಯವಾಗುವುದಿಲ್ಲ. ಆದ್ದರಿಂದ ವೈದ್ಯರನ್ನು ಸೃಷ್ಟಿ ಮಾಡಿದ್ದಾರೆ. ಮಕ್ಕಳು ಅಮ್ಮನ ಹೊಟ್ಟೆಯಲ್ಲಿ 9 ತಿಂಗಳು ಇರುತ್ತವೆ. ಒಂದು ಮಗು ಸೃಷ್ಟಿಯಾಗಲು 9 ತಿಂಗಳು ಬೇಕು. ಆದರೆ ಕೆಲ ಮಕ್ಕಳು ಬೆಳವಣಿಗೆ ಸರಿಯಾಗಿ ಆಗದೇಯೂ 7 ತಿಂಗಳಿಗೆ ಪ್ರಸವವಾಗುತ್ತೆ. ಆದರೆ ಆ ಮಕ್ಕಳನ್ನು ಬದುಕುಸುವುದು ಸಾಹಸ. ಈ ಸಾಹಸವನ್ನು ಬೆಂಗಳೂರಿನ ವೈದ್ಯರೊಬ್ಬರು ಮಾಡಿದ್ದಾರೆ. ಸುಪ್ರ ಆಸ್ಪತ್ರೆಯಲ್ಲಿ ಅವಧಿಗೂ ಮುಂಚೆ ಜನಿಸಿದ 7 ತಿಂಗಳ ಮಗು ಜೀವನ್ಮರಣ ಹೋರಾಟ ನಡೆಸುತ್ತಿತ್ತು. ವೈದ್ಯ ಡಾ. ವಿಜಯ ಮಾಂತೇಶ್​ ಮಾರ್ಗದರ್ಶದಲ್ಲಿ ಚಿಕಿತ್ಸೆ ನಡೆಸಿ ಮಗುವನ್ನು ರಕ್ಷಣೆ ಮಾಡಲಾಗಿದೆ. ಮಕ್ಕಳ ತಜ್ಞ ವೈದ್ಯೆ ಡಾ. ಸ್ಪೂರ್ತಿ ಹಾಗೂ ಡಾಕ್ಟರ್​ ನುಸ್ರತ್, ಡಾ. ಮನು​​ ಮಗುವಿಗೆ ಚಿಕಿತ್ಸೆ ನೀಡಿದ್ದಾರೆ. 7 ತಿಂಗಳಿಗೆ ಜನಿಸಿದ ಮಗುವನ್ನು ಹರಸಾಹಸ ಮಾಡಿ ಬದುಕಿಸಿದ್ದಾರೆ. ವೈದ್ಯರ ಈ ಕಾರ್ಯಕ್ಕೆ ಪೋಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿದ್ದು ಸ್ಪರ್ಧೆಗಾಗಿ ಅಭಿಮಾನಿ ಹರಕೆ