Select Your Language

Notifications

webdunia
webdunia
webdunia
webdunia

ಇಂದು ರಾಷ್ಟ್ರೀಯ ರೈತ ದಿನ

Today is National Farmers Day
bangalore , ಶುಕ್ರವಾರ, 23 ಡಿಸೆಂಬರ್ 2022 (17:31 IST)
ಇಂದು ರಾಷ್ಟ್ರೀಯ ರೈತ ದಿನಾಚರಣೆ. ಭಾರತದ 5ನೇ ಪ್ರಧಾನಿ ಚೌಧರಿ ಚರಣ್ ಸಿಂಗ್ ಅವರ ಜನ್ಮದಿನವಾದ ಡಿಸೆಂಬರ್ 23 ರಂದು ರಾಷ್ಟ್ರೀಯ ರೈತ ದಿನಾಚರಣೆ ಮಾಡಲಾಗುತ್ತೆ. ಈ ಕುರಿತು ಟ್ವೀಟ್​ ಮಾಡಿರುವ ರಾಜ್ಯ BJP,​ ಪ್ರತಿ ವರ್ಷ ರಾಷ್ಟ್ರೀಯ ರೈತ ದಿನಾಚರಣೆಯಾಗಿ ದೇಶದಾದ್ಯಂತ ಆಚರಿಸಲಾಗುತ್ತದೆ. ದೇಶದ ಬೆನ್ನೆಲುಬಾಗಿ ನಮ್ಮೆಲ್ಲರ ಅನ್ನದಾತರಾಗಿರುವ ರೈತರಿಗೆ ಧನ್ಯವಾದಗಳು ಎಂದಿದೆ. ಅಂತೆಯೇ ಕೇಂದ್ರ ಸಚಿವ ಪ್ರಹ್ಲಾದ್​​ ಜೋಶಿ ಟ್ವೀಟ್​ ಮಾಡಿ, ದೇಶದ ಪ್ರಗತಿಗೆ ಬೆನ್ನೆಲುಬಾಗಿ ನಿಂತು, ತಮ್ಮ ಕಷ್ಟಗಳನ್ನೆಲ್ಲ ನುಂಗಿಕೊಂಡು, ಹಗಲಿರುಳು ನಮಗಾಗಿ ಶ್ರಮಿಸುವ ರೈತರಿಗೆ ಕೋಟಿ ಕೋಟಿ ನಮನಗಳು. ಅವರಿಲ್ಲದೆ ನಮ್ಮ ಬಾಳನ್ನು ಊಹಿಸುವುದು ಕೂಡ ಅಸಾಧ್ಯ. ಎಲ್ಲ ರೈತ ಮಿತ್ರರಿಗೆ ರೈತ ದಿನದ ಶುಭಾಶಯಗಳು ಎಂದಿದ್ದಾರೆ. ಜೊತೆಗೆ ರೈತರ ಕುರಿತ ವಿಡಿಯೋವನ್ನು ಶೇರ್​​​ ಮಾಡಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಕೊರೋನಾ ಜಾಗೃತಿಗೆ BBMP ಒತ್ತು