Webdunia - Bharat's app for daily news and videos

Install App

ಪ್ರಜ್ವಲ್ ರೇವಣ್ಣ ಬಗ್ಗೆ ಸಂತ್ರಸ್ತೆ ಬಿಚ್ಚಿಟ್ಟ ಭಯಾನಕ ಸತ್ಯಗಳು

Sampriya
ಶುಕ್ರವಾರ, 3 ಮೇ 2024 (15:57 IST)
ಬೆಂಗಳೂರು: ದೇಶದಲ್ಲಿ ಸಂಚಲನ ಮೂಡಿಸಿರುವ ಹಾಸನ ಸಂಸದರ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣಗೆ ಇದೀಗ ಮತ್ತೊಂದು ಸಂಕಷ್ಟ ಎದರುರಾಗಿದೆ.  

ಇದೀಗ ಮತ್ತೋರ್ವ ಸಂತ್ರಸ್ತೆ ಅಪರಾಧ ತನಿಖಾ ಇಲಾಖೆಗೆ ದೂರು ನೀಡಿದ್ದು, ಈ ಸಂಬಂಧ ಇದೀಗ ಪ್ರಜ್ವಲ್ ರೇವಣ್ಣ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಎ1 ಆರೋಪಿಯಾಗಿದ್ದಾರೆ.

ಇನ್ನೂ ದೂರಿನಲ್ಲಿ ಮಹಿಳೆ ಬೆಚ್ಚಿಬೀಳಿಸುವ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ದೂರುದಾರೆ ಹಾಸನ ಜಿಲ್ಲೆಯಲ್ಲಿ ಜನಪ್ರತಿನಿಧಿಯಾಗಿದ್ದು,  ಶಾಸಕರು ಹಾಗೂ ಸಂಸದರ ಬಳಿ ಕ್ಷೇತ್ರದ ಅಭಿವೃದ್ಧಿ ಕೆಲಸದ ಬಗ್ಗೆ ಚರ್ಚಿಸಲು ಸಂಸದ ಪ್ರಜ್ವಲ್ ಭೇಟಿಯಾಗಲು ಹೋಗಿದ್ದಾರೆ. ಮೊದಲ ದಿನ ಭೇಟಿಯಾಗದ ಕಾರಣ, ಮರುದಿನ ಹಾಸನದ ಎಂಪಿ ನಿವಾಸಕ್ಕೆ ಪ್ರಜ್ವಲ್ ರೇವಣ್ಣ ಕರೆಸಿಕೊಂಡಿದ್ದಾರೆ. ನೆಲ ಮಹಡಿಯಲ್ಲಿ ಹೆಚ್ಚಿನ ಜನ ಇದ್ದರಿಂದ ಮೇಲ್ಮಹಡಿಯಲ್ಲಿ ಕಾಯುವಂತೆ ಹೇಳಿದ್ದಾರೆ. ಮೇಲ್ಮಹಡಿಯಲ್ಲಿ ಇನ್ನೂ ಕೆಲ ಮಹಿಳೆಯರಿಂದು ಅವರ ಜತೆ ಕಾದು ಕುಳಿತುಕೊಳ್ಳಿ ಎಂದಿದ್ದಾರೆ.

ಸ್ವಲ್ಪ ಹೊತ್ತು ಬಿಟ್ಟು ಬಂದ ಪ್ರಜ್ವಲ್ ರೇವಣ್ಣ ಮೊದಲು ಬಂದಿದ್ದ ಮಹಿಳೆಯನ್ನು ಮತಾನಾಡಿಸಿ ಕಳುಹಿಸಿದ್ದಾನೆ. ನಂತರ ನನ್ನನ್ನು ಕೋಣೆಯೊಳಗೆ ಕರೆದು ಬಾಗಿಲು ಹಾಕಿ ಕೈ ಹಿಡಿದು ಎಳೆದು ಮೈಮೇಲೆ ಎಳೆದುಕೊಂಡರು. ಜೋರಾಗಿ ಕೂಗುವುದಾಗಿ ಹೇಳಿದ್ದಕ್ಕೆ ಗನ್ ಇಟ್ಟು ಬೆದರಿಸಿದ್ದಾರೆ. ಅದಲ್ಲದೆ ನಿನ್ನ ಗಂಡನಿಂದ ನನ್ನ ತಾಯಿಯ ಎಂಎಲ್ಎ ಟಿಕೆಟ್ ತಪ್ಪಿದೆ. ಅವನು ಜಾಸ್ತಿ ಮಾತಾಡುತ್ತಾನೆ ಸುಮ್ಮನೆ ಇರಲು ಹೇಳು ಎಂದು ಬೆದರಿಕೆ ಹಾಕಿದ್ದಾನೆ. ನನ್ನ ಮೇಲೆ ಅತ್ಯಾಚಾರ ಎಸಗಿದ ವಿಡಿಯೋ ಕಳುಹಿಸಿ ಪದೇ ಪದೇ ಸಹಕರಿಸುವಂತೆ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಏ.28ರಂದು ಸಂದ ಪ್ರಜ್ವಲ್ ರೇವಣ್ಣ ಹಾಗೂ ಮಾಜಿ ಸಚಿವ ಎಚ್ ಡಿ ರೇವಣ್ಣ ವಿರುದ್ಧ ಮಾಜಿ ಮನೆ ಕೆಲಸದಾಕೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇರೆಗೆ ಹೊಳೆನರಸೀಪುರ ಠಾಣೆಯಲ್ಲಿ ದೂರು ನೀಡಿದ್ದರು.  ಇದರ ಬೆನ್ನಲ್ಲೇ ಹಾಸನ ಮೂಲದ ಮಹಿಳೆ ಪ್ರಜ್ವಲ್​ ರೇವಣ್ಣ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಎಸ್​ಐಟಿಗೆ ಹೇಳಿಕೆ ನೀಡಿದ್ದರು. ಎಸ್​ಐಟಿ ಹೇಳಿಕೆ ಆಧರಿಸಿ ಪ್ರಜ್ವಲ್​ ರೇವಣ್ಣ ವಿರುದ್ಧ ಎಫ್​ಐಆರ್​​ ದಾಖಲಿಸಿಕೊಂಡಿದ್ದೆ.ಇದರ ಬೆನ್ನಲೇ ಇದೀಗ ಸಂತ್ರಸ್ತೆ ಪತಿ ಸಿಐಡಿಗೆ ದೂರು ನೀಡಿದ್ದು, ಪ್ರಜ್ವಲ್​ ರೇವಣ್ಣಗೆ ಸಂಕಷ್ಟ ಜಾಸ್ತಿಯಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಾಲು ಸಾಲು ಪ್ರತಿಭಟನೆ ಬೆನ್ನಲ್ಲೇ ದೊಡ್ಡ ಮಟ್ಟದ ಸಭೆ ನಡೆಸಿದ ಮಲ್ಲಿಕಾರ್ಜುನ ಖರ್ಗೆ

ಆರ್ಯಭಟ್ಟರು ಸೊನ್ನೆಯಿಂದ ಇತಿಹಾಸ ನಿರ್ಮಿಸಿದರು: ಪ್ರಧಾನಿ ಮೋದಿ

ಲಕ್ಷ್ಮೀ ಹೆಬ್ಬಾಳಕರ, ರಾಜ್ಯಪಾಲರ ಸಹಿ ನಕಲು ಮಾಡಿ ಲಕ್ಷಾಂತರ ವಂಚನೆ: ಬಿಗ್ ಅಪ್ಡೇಟ್ ನೀಡಿದ ಎಸ್‌ಪಿ

ಲಾಲ್‌ ಬಾಗ್‌, ಕಬ್ಬನ್ ಪಾರ್ಕ್‌ನಂತಹ ಇನ್ನಷ್ಟು ಉದ್ಯಾನವನಗಳ ಅಗತ್ಯವಿದೆ: ಈಶ್ವರ್ ಖಂಡ್ರೆ

ವಿಧಾನಸಭೆಯಲ್ಲೂ ಪ್ರತಿಧ್ವನಿಸಿದ ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣ: ವರದಿ ಬಿಡುಗಡೆಗೆ ಬಿಜೆಪಿ ಆಗ್ರಹ

ಮುಂದಿನ ಸುದ್ದಿ