Select Your Language

Notifications

webdunia
webdunia
webdunia
webdunia

ತೆಲಂಗಾಣಾ ಚುನಾವಣೆ: ರಾಜ್ಯದ ಗಡಿ ಪ್ರದೇಶದಲ್ಲಿ ಮದ್ಯ ಮಾರಾಟ ನಿಷೇಧ

ತೆಲಂಗಾಣಾ  ಚುನಾವಣೆ: ರಾಜ್ಯದ ಗಡಿ ಪ್ರದೇಶದಲ್ಲಿ ಮದ್ಯ ಮಾರಾಟ ನಿಷೇಧ
ಕಲಬುರಗಿ , ಶುಕ್ರವಾರ, 30 ನವೆಂಬರ್ 2018 (19:06 IST)
ತೆಲಂಗಾಣಾ ರಾಜ್ಯದ ವಿಧಾನ ಸಭೆ ಚುನಾವಣೆಗಳ ಹಿನ್ನೆಲೆಯಲ್ಲಿ ತೆಲಂಗಾಣಾ ರಾಜ್ಯದ 5 ಕಿ.ಮೀ ವ್ಯಾಪ್ತಿಯಲ್ಲಿರುವ ರಾಜ್ಯದ ಗಡಿ ಗ್ರಾಮಗಳಲ್ಲಿ ಮದ್ಯ ಮಾರಾಟ ನಿಷೇಧ ಮಾಡಲಾಗಿದೆ.

ಕಲಬುರಗಿ ಜಿಲ್ಲೆಯ ಗಡಿ ಭಾಗಗಳಲ್ಲಿ ಮತದಾನ ಹಾಗೂ ಮತ ಏಣಿಕೆಯ ದಿನಗಳಂದು ಮದ್ಯ ಮಾರಾಟವನ್ನು ನಿಷೇಧಿಸಿ ಜಿಲ್ಲಾ ದಂಡಾಧಿಕಾರಿ ಹಾಗೂ ಜಿಲ್ಲಾಧಿಕಾರಿ  ಆರ್. ವೆಂಕಟೇಶಕುಮಾರ ಆದೇಶ ಹೊರಡಿಸಿದ್ದಾರೆ.

      ಮತದಾನದ ಪ್ರಯುಕ್ತ ಡಿಸೆಂಬರ್ 5ರ ಸಂಜೆ 6 ಗಂಟೆಯಿಂದ ಡಿಸೆಂಬರ್ 7ರ ಮಧ್ಯರಾತ್ರಿಯವರೆಗೆ ಹಾಗೂ ಮತ ಏಣಿಕೆ ಹಿನ್ನೆಲೆಯಲ್ಲಿ ಡಿಸೆಂಬರ್ 10ರ ಸಾಯಂಕಾಲ 6 ಗಂಟೆಯಿಂದ ಡಿಸೆಂಬರ್ 11ರ ಮಧ್ಯರಾತ್ರಿಯವರೆಗೆ ಈ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ.

ಈ ಅವಧಿಯಲ್ಲಿ ಯಾವುದೇ ರೀತಿಯ ಮದ್ಯದಂಗಡಿಗಳು ತೆರೆಯುವಂತಿಲ್ಲ. ಒಂದು ವೇಳೆ ಕಾನೂನು ಉಲ್ಲಂಘಿಸುವುದು ಕಂಡು ಬಂದಲ್ಲಿ ಅಂಥವರ ವಿರುದ್ಧ ಕಾಯ್ದೆಯಡಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು  ಅವರು ತಿಳಿಸಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಡಿಸೆಂಬರ್ 1 ರಿಂದ ಕಾಲುವೆಗೆ ನೀರು ಹರಿಯೋದಿಲ್ಲ