ಬೆಂಗಳೂರು: ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಖ್ಯಾತ ಗಾಯಕಿ ಜೊತೆ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಅಷ್ಟಕ್ಕೂ ತೇಜಸ್ವಿ ಸೂರ್ಯ ಮದುವೆಯಾಗಲಿರುವ ಹುಡುಗಿ ಯಾರು ಗೊತ್ತಾ? ಇಲ್ಲಿದೆ ವಿವರ.
ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್. ಇದೀಗ ಸ್ವತಃ ಪ್ರಧಾನಿ ಮೋದಿಯೇ ಹೊಗಳಿದ್ದ ಖ್ಯಾತ ಗಾಯಕಿ, ಭರತನಾಟ್ಯ ಕಲಾವಿದೆ ಶಿವ ಶ್ರೀ ಸ್ಕಂದ ಪ್ರಸಾದ್ ಅವರನ್ನು ತೇಜಸ್ವಿ ಮದುವೆಯಾಗಲಿದ್ದಾರೆ ಎಂದು ತಿಳಿದುಬಂದಿದೆ.
ಶಿವ ಶ್ರೀ ಸ್ಕಂದ ಪ್ರಸಾದ್ ಅವರು ಮೂಲತಃ ಚೆನ್ನೈಯವರಾಗಿದ್ದು, ಕರ್ನಾಟಕ ಸೇರಿದಂತೆ ಅನೇಕ ಕಡೆ ತಮ್ಮ ಹಾಡಿನ ಮೂಲಕ ಅಪಾರ ಅಭಿಮಾನಿ ವರ್ಗದವರನ್ನು ಹೊಂದಿದ್ದಾರೆ. ಯೂ ಟ್ಯೂಬ್ ನಲ್ಲಿ ಅವರಿಗೆ ಲಕ್ಷಾಂತರ ಫಾಲೋವರ್ಸ್ ಗಳಿದ್ದಾರೆ. ಈ ಹಿಂದೆ ಅಯೋಧ್ಯೆ ರಾಮಮಂದಿರ ಉದ್ಘಾಟನೆ ಸಂದರ್ಭದಲ್ಲಿ ಶಿವಶ್ರೀ ಹಾಡಿದ ರಾಮನ ಹಾಡೊಂದನ್ನು ಸ್ವತಃ ಮೋದಿ ಹೊಗಳಿ ಟ್ವೀಟ್ ಮಾಡಿದ್ದರು.
ಇದೀಗ ಶಿವ ಶ್ರೀ ಮತ್ತು ತೇಜಸ್ವಿ ಸೂರ್ಯ ಮದುವೆ ಬಗ್ಗೆ ಎರಡೂ ಕುಟುಂಬಗಳು ಮಾತುಕತೆ ನಡೆಸಿ ಒಪ್ಪಿಗೆ ಸೂಚಿಸಿವೆ ಎನ್ನಲಾಗಿದೆ. ಕೇವಲ ಗಾಯಕಿ ಮಾತ್ರವಲ್ಲ ಶಿವಶ್ರೀ ಬಯೋ ಇಂಜಿನಿಯರಿಂಗ್ ನಲ್ಲಿ ಬಿಟೆಕ್ ಪದವಿಯನ್ನೂ ಪಡೆದಿದ್ದಾರೆ. ಅಲ್ಲದೆ ಚೆನ್ನೈನ ಸಂಸ್ಕೃತ ಕಾಲೇಜಿನಲ್ಲಿ ಎಂಎ ಪದವಿ ಪಡೆದಿದ್ದಾರೆ. 2025 ರ ಮಾರ್ಚ್ ನಲ್ಲಿ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ಸುದ್ದಿ ಬಂದಿದೆ.