ಸಂಸದ ತೇಜಸ್ವಿ ಸೂರ್ಯ ಹಾಗೂ ಖ್ಯಾತ ಗಾಯಕಿ ಶಿವಶ್ರೀ ಸ್ಕಂದಪ್ರಸಾದ್ ಅವರ ವಿವಾಹವು ಕುಟುಂಬಸ್ಥರ, ಆಪ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ನಡೆಯಿತು. ಇನ್ನೂ ಆರತಕ್ಷತೆಯಲ್ಲಿ ರಾಜ್ಯದ ಸಿಎಂ ಸೇರಿದಂತೆ ಕೇಂದ್ರದ ಸಚಿವರುಗಳು ಪಾಲ್ಗೊಂಡು ನವ ವಧು ವರರಿಗೆ ಹಾರೈಸಿದರು.
ಇದೀಗ ಸಾಮಾಜಿಕ ಜಾಲತಾಣದಲ್ಲಿ ತೇಜಸ್ವಿ ಸೂರ್ಯ ಹಾಗೂ ಶಿವಶ್ರೀ ಸ್ಕಂದಕುಮಾರ್ ಅವರ ತುಂಬಾ ಹೃದಯಸ್ಪರ್ಶಿ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹೆಣ್ಣು ಒಪ್ಪಿಸೋ ಶಾಸ್ತ್ರದ ವಿಡಿಯೋ ವೈರಲ್ ಆಗಿದೆ. ವಿಡಿಯೋದಲ್ಲಿ ತೇಜಸ್ವಿ ಸೂರ್ಯ ಅವರ ಮಡಿಲಿನಲ್ಲಿ ಕೂರಿಸಿ, ನಂತರ ತೇಜಸ್ವಿ ಮಡಿಲಿಗೆ ಶಿವಶ್ರೀಯನ್ನು ತಂದೆ ತಾಯಿ ಮಗಳನ್ನು ಒಪ್ಪಿಸುತ್ತಾರೆ. ಈ ವೇಳೆ ಅಳುತ್ತಿದ್ದ ಹೆಂಡತಿಯ ಕೆನ್ನೆಗೆ ಮುತ್ತಿಟ್ಟು ಸಮಾಧಾನ ಮಾಡುತ್ತಾರೆ.