Select Your Language

Notifications

webdunia
webdunia
webdunia
webdunia

ಪರ್ಲ್ ಅಕಾಡೆಮಿಯ ಪೋರ್ಟ್ ಫೋಲಿಯೊ 2024 ರಲ್ಲಿ ಬೆರಗುಗೊಳಿಸಿತು ಸೃಜನಶೀಲತೆಯ ಪ್ರದರ್ಶನ

Pearl Academy

Sampriya

ಬೆಂಗಳೂರು , ಶನಿವಾರ, 18 ಮೇ 2024 (19:06 IST)
Photo Courtesy X
ಬೆಂಗಳೂರು: ವಿದ್ಯಾರ್ಥಿಗಳ  ವಿಶಿಷ್ಟ ಸಾಮರ್ಥ್ಯವನ್ನು ಯಾವಾಗಲೂ ಗುರುತಿಸಿ ಸಂಭ್ರಮಿಸುವ ಪರ್ಲ್ ಅಕಾಡೆಮಿ ಬೆಂಗಳೂರಿನ ಭಾರತದ ತಂತ್ರಜ್ಞಾನ ಕೇಂದ್ರದಲ್ಲಿ `ಪೋರ್ಟ್ ಫೋಲಿಯೊ 2024' ಪ್ರಸ್ತುತಪಡಿಸಿತು.

ಪ್ರದರ್ಶನವು ಸಂಚಲನಾತ್ಮಕ ತಂತ್ರಜ್ಞಾನದ ಸುತ್ತಲೂ ಚಿಂತನೆಗೆ ಹಚ್ಚುವ ಪರಿಕಲ್ಪನೆಗಳ ಮೂಲಕ ನಗರದ ಸೃಜನಶೀಲ ಮತ್ತು ಆವಿಷ್ಕಾರಕ ಸಂವಾದಗಳನ್ನು ನಡೆಸಿತು.

ಈ ಕಾರ್ಯಕ್ರಮವು ವರ್ಚುಯಲ್ ಜಗತ್ತಿನಲ್ಲಿ ಅಲೆಮಾರಿಗಳಂತೆ ಇರುವ ಡಿಜಿಟಲ್ ನೇಟಿವ್‌ಗಳಿಂದ ಸ್ಫೂರ್ತಿ ಪಡೆದ `ಟೆಕ್ ನೊಮ್ಯಾಡ್ಸ್' ವಸ್ತು ಆಧರಿಸಿತ್ತು. ಪ್ರದರ್ಶಿಸಲಾದ ಪ್ರಾಜೆಕ್ಟ್ ಗಳು ತಂತ್ರಜ್ಞಾನ ಮತ್ತು ಸೃಜನಶೀಲತೆಯ ಆಸಕ್ತಿದಾಯಕ ಸಂಯೋಜನೆಯಾಗಿದ್ದವು.

ಪರ್ಲ್ ಅಕಾಡೆಮಿ ಅಧ್ಯಕ್ಷೆ ಅದಿತಿ ಶ್ರೀವಾಸ್ತವ ಮತ್ತು ಪರ್ಲ್ ಅಕಾಡೆಮಿ ಬೆಂಗಳೂರಿನ ರೀಜನಲ್ ಕ್ಯಾಂಪಸ್ ಡೈರೆಕ್ಟರ್ ಸನ್ಯೋಗಿತಾ ಛಾಧಾ, ಫ್ಯಾಷನ್, ಬಿಸಿನೆಸ್, ಇಂಟೀರಿಯರ್ ಡೀನ್ ಆಂಟೊನಿಯೊ ಮೌರಿಜೊ ಗ್ರಿಯೊಳಿ ಮತ್ತು ಕಮ್ಯುನಿಕೇಷನ್, ಡಿಸೈನ್, ಫಿಲ್ಮ್ ಅಂಡ್ ಗೇಮಿಂಗ್ ಡೀನ್ ಸಿ.ಬಿ. ಅರುಣ್ ಅವರೊಂದಿಗೆ ಉದ್ಯಮದ ಖ್ಯಾತನಾಮರು ಮತ್ತು ಗಣ್ಯ ಹಳೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪರ್ಲ್ ಅಕಾಡೆಮಿಯು ಇತ್ತೀಚೆಗೆ ಎಫ್.ಡಿ.ಸಿ.ಐ.ನೊಂದಿಗೆ ತನ್ನ ಸುದೀರ್ಘ ಬಾಂಧವ್ಯವನ್ನು ಸದೃಢಗೊಳಿಸಿದ್ದು ಅಲ್ಪಾವಧಿ ಕೋರ್ಸ್ ಗಳಿಗೆ ಕೋ-ಸರ್ಟಿಫಿಕೇಷನ್ ಮತ್ತು ಪ್ರಮುಖ ಭಾರತೀಯ ಫ್ಯಾಷನ್ ಡಿಸೈನರ್ ಗಳಿಂದ ಮಾಸ್ಟರ್ ಕ್ಲಾಸ್ ಅಲ್ಲದೆ ವಿದ್ಯಾರ್ಥಿಗಳಿಗೆ ಮೌಲ್ಯಯುತ ಕಲಿಕಾ ಅನುಭವಗಳು ಮತ್ತು ಉದ್ಯಮದ ನೇರ ಅನುಭವ ಪಡೆದುಕೊಳ್ಳಲು ನೆರವಾಗುತ್ತಿದೆ. ಎಫ್.ಡಿ.ಸಿ.ಐ. ಸಹಯೋಗವು ವಿದ್ಯಾರ್ಥಿಗಳಿಗೆ ಅವರ ಕಲೆಯನ್ನು ಲ್ಯಾಕ್ಮೆ ಫ್ಯಾಷನ್ ವೀಕ್ ಮತ್ತು ಇಂಡಿಯಾ ಕೊಟ್ಯೂರ್ ವೀಕ್ ಗಳಲ್ಲಿ ಪ್ರದರ್ಶಿಸಲು ಅವಕಾಶ ಕಲ್ಪಿಸಿತು.

ಆಕರ್ಷಕ ಪ್ರದರ್ಶನಗಳಲ್ಲದೆ ಪೋರ್ಟ್ ಫೋಲಿಯೊ 2024ರಲ್ಲಿ ವಿಶೇಷ ಕಾರ್ಯಾಗಾರಗಳು, ಫ್ಯಾಷನ್ ಶೋ ಮತ್ತು ಚಿಂತನೆಗೆ ಹಚ್ಚುವ ವಿಚಾರ ಸಂಕಿರಣಗಳಿದ್ದು ಸೃಜನಶೀಲ ಆಕಾಂಕ್ಷಿಗಳಲ್ಲಿ ಸಂವಾದ ಮತ್ತು ಮಾಹಿತಿ ವಿನಿಮಯಕ್ಕೆ ಅವಕಾಶ ಕಲ್ಪಿಸಿತು.

ವಿದ್ಯಾರ್ಥಿಗಳು ಸಿ.ಎಲ್.ಒ. 3ಡಿ ಸಾಫ್ಟ್ ವೇರ್ ನೆರವಿನಿಂದ ವರ್ಚುಯಲ್, ಜೀವನಕ್ಕೆ ಹತ್ತಿರವಾದ ಫ್ಯಾಷನ್ ಡಿಸೈನ್ ಪ್ರಾಜೆಕ್ಟ್ ಗಳನ್ನು ಅತ್ಯಾಧುನಿಕ ಸಿಮುಲೇಷನ್ ತಂತ್ರಜ್ಞಾನದ ಮೂಲಕ ರೂಪಿಸಿದರು.

ಪರ್ಲ್ ಅಕಾಡೆಮಿಯ ವಿದ್ಯಾರ್ಥಿಗಳ ಪ್ರತಿಭೆ ಮತ್ತು ಕಠಿಣ ಪರಿಶ್ರಮ ಕುರಿತು ಪರ್ಲ್ ಅಕಾಡೆಮಿ ಅಧ್ಯಕ್ಷೆ ಅದಿತಿ ಶ್ರೀವಾಸ್ತವ, 'ಪೋರ್ಟ್ ಫೋಲಿಯೊ 2024ರೊಂದಿಗೆ ನಾವು ನಮ್ಮ ವಿದ್ಯಾರ್ಥಿಗಳ ಸೃಜನಶೀಲ ಪ್ರತಿಭೆಯನ್ನು ಸಂಭ್ರಮಿಸುತ್ತಿದ್ದು ಅವರು ತಂತ್ರಜ್ಞಾನವು ಹೇಗೆ ವಿನ್ಯಾಸದ ಭವಿಷ್ಯಕ್ಕೆ ಪರಿಣಾಮ ಬೀರಬಹುದು ಎಂದು ಪ್ರದರ್ಶಿಸಿದ್ದಾರೆ.

ಈ ವಾರ್ಷಿಕ ಕಾರ್ಯಕ್ರಮವು ನಮ್ಮ ಸಂಸ್ಥೆಯ ಅಂತಃಸತ್ವವನ್ನು ಮೈಗೂಡಿಸಿಕೊಂಡಿದ್ದು ಇಲ್ಲಿ ಕಲ್ಪನೆಯು ಉದ್ಯಮವನ್ನು ಸಂಧಿಸುತ್ತದೆ ಮತ್ತು ಪ್ರತಿ ಪ್ರಾಜೆಕ್ಟ್ ಕೂಡಾ ಆಸಕ್ತಿ, ಜಾಣ್ಮೆ ಮತ್ತು ನಾವು ಜೀವಿಸುತ್ತಿರುವ ಜಗತ್ತಿನ ಆಳವಾದ ಅರ್ಥೈಸಿಕೊಳ್ಳುವಿಕೆಯ ಕಥೆ ಹೇಳುತ್ತದೆ ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿರಾನಗರದಲ್ಲಿ ಯು.ಎಸ್. ಪೋಲೋ ಅಸೋಸಿಯೇಷನ್ ಹೊಸ ಮಳಿಗೆ ಪ್ರಾರಂಭ