Publish Date: Thu, 06 Oct 2022 (20:37 IST)
Updated Date: Thu, 06 Oct 2022 (20:44 IST)
ಶಿವಮೊಗ್ಗದಿಂದ ಬೆಂಗಳೂರಿಗೆ ಆಗಮಿಸಿ ಗಂಧದ ಮರ ಕದ್ದಿಯುತ್ತಿದ್ದ ಮೂವರು ಕಳ್ಳರನ್ನ ಬೆಂಗಳೂರಿನ ಬಾಗಲಗುಂಟೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಬಂಧಿತರಿಂದ 150 ಕೆಜಿ ಶ್ರೀಗಂಧದ ತುಂಡುಗಳನ್ನ ಪೊಲೀಸರು ವಶಪಡಿಸಿಕೊಂಡಿದ್ದಾರೆ.ಪೀಣ್ಯ ಟೋಲ್ ಮೂಲಕ ಹಾದು ಹೋಗ್ತಿದ್ದ ವೇಳೆ ರೆಡ್ ಹ್ಯಾಂಡಾಗಿ ಕಳ್ಳರು ಪೊಲೀಸರ ಬಲೆಗೆ ಬಿದ್ದಿದ್ದಾರೆ.ನಂದಿನಿಲೇಔಟ್, ಆರ್ ಎಂ ಸಿ ಯಾರ್ಡ್ ನಲ್ಲಿ ಶ್ರೀಗಂಧ ಮರ ಕಡಿದು ಕದ್ದೊಯ್ದಿದ್ದರು.ಮಾರುತಿ 800 ಕಾರಿನಲ್ಲಿ ಮರದ ದಿಮ್ಮಿ ಸಾಗಿಸ್ತಿದ್ದ ಕಳ್ಳರನ್ನ ಅರೆಸ್ಟ್‌ಮಾಡಿದ್ದಾರೆ.
ಟೋಲ್ ನಲ್ಲಿ ಸಿಕ್ಕ ಕಾರಿನ ನಂಬರ್ ನಿಂದ ಕಳ್ಳರನ್ನ ಬಾಗಲಗುಂಟೆ ಪೊಲೀಸರು ಪತ್ತೆ ಹಂಚಿ ಕೊನೆಗೂ ಶ್ರೀಗಂಧ ಚೋರರನ್ನ ಪೊಲೀಸರು ಬಂಧಿಸಿದ್ದಾರೆ.