8 ಜನ ಶಿಕ್ಷಕರನ್ನು ಅಮಾನತುಗೊಳಿಸಿ ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.ಚೈನ್ ಲಿಂಕ್ ವ್ಯವಹಾರದಲ್ಲಿ ಶಿಕ್ಷಕರು ತೊಡಗಿದ್ದರು ಅನ್ನೋ ಮಾಹಿತಿ ಲಭಿಸಿದ್ದು,ಈ ಹಿಂದೆ ಶಿಕ್ಷಕರ ಅವ್ಯವಾಹರದ ಬಗ್ಗೆ ರುಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಸುದ್ದಿಗೋಷ್ಠಿ ನಡೆಸಿ ದಾಖಲೆ ಬಿಡುಗಡೆ ಮಾಡಿದ್ರು.
ಈ ಹಿನ್ನೆಲೆ ಶಿಕ್ಷಣ ಇಲಾಖೆ ಆಯುಕ್ತರ ಸೂಚನೆಯ ಮೇರೆಗೆ ೧೬ ಶಿಕ್ಷಕರ ವಿಚಾರಣೆ ನಡೆಸಲಾಗಿದೆ.ಅದರಲ್ಲಿ ೮ ಜನ ಶಿಕ್ಷಕರು ಅಗತ್ಯ ದಾಖಲೆ ನೀಡಿ ವಿವರಣೆ ನೀಡಿದ್ರು.ಇನ್ನುಳಿದ ೮ ಮಂದಿಯ ವಿಚಾರಣೆಯಲ್ಲಿ ಲೋಪ ಕಂಡು ಬಂದ ಹಿನ್ನೆಲೆ ಅಮಾನತು ಮಾಡಲಾಗಿದೆ.ಇಷ್ಟಕ್ಕೆ ಸುಮ್ಮನಾಗದ ಖಾಸಗಿ ಶಾಲಾ ರುಪ್ಸಾ ರಾಜ್ಯಾಧ್ಯಕ್ಷ ಲೋಕೇಶ್ ತಾಳಿಕಟ್ಟೆ ಸಿಎಂ ಗೆ ಶಿಕ್ಷಣ ಇಲಾಖೆಗೆ ಪತ್ರ ಬರೆದು ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.