Select Your Language

Notifications

webdunia
webdunia
webdunia
webdunia

ಶಿಕ್ಷಕಿಯ ಸರ ಕದ್ದ ಕಳ್ಳನ ಬಂಧನ

teacher
bengaluru , ಶುಕ್ರವಾರ, 6 ಆಗಸ್ಟ್ 2021 (13:16 IST)
ಶಿಕ್ಷಕಿಯ ಸರ ಕಳ್ಳತನ ಮಾಡಿದ್ದ ಯುವಕನನ್ನು ಮಂಗಳೂರಿನ ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಬಿಸಿಎ ಪದವೀಧರ ಚಿಕ್ಕಮಗಳೂರಿನ ಕೆ.ಎಸ್.ಶ್ರೀಯಸ್ (24), ಎಂದು ಗುರುತಿಸಲಾಗಿದೆ.

ಸುರತ್ಕಲ್‌ನ ಶಾಲೆಯ ಶಿಕ್ಷಕಿಯೊಬ್ಬರು ಮೊನ್ನೆ ಮಧ್ಯಾಹ್ನ ಮನೆಯಿಂದ ಶಾಲೆಗೆ ಹೋಗುತ್ತಿದ್ದಾಗ ವಿದ್ಯಾದಾಯಿನಿ ಸಮೀಪ ಅಂಡರ್ ಪಾಸ್ ಬಳಿ ಅಪರಿಚಿತನೊಬ್ಬ ಕರಿಮಣಿ ಸರ ಎಳೆದು ಪರಾರಿಯಾಗಿದ್ದ.
ಸ್ಥಳೀಯ ಸಿಸಿಟಿವಿ ದೃಶ್ಯ ಆಧರಿಸಿ ಕಾರ್ಯಾಚರಣೆ ನಡೆಸಿದ್ದರು. ಬೈಕ್ ಶೋರೂಂ ಬಳಿ ನಿಂತಿದ್ದ ಈತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸುಲಿಗೆ ಮಾಡಿದ್ದನ್ನು ಈತ ಒಪ್ಪಿಕೊಂಡಿದ್ದಾನೆ. ಆರೋಪಿಯಿಂದ ಚಿನ್ನದ ಕರಿಮಣಿ ಸರವನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಾಳೆ SSLC ಫಲಿತಾಂಶ ಪ್ರಕಟ