Webdunia - Bharat's app for daily news and videos

Install App

ಟೀಚೆರ್ ಆಫ್ ದಿ ಇಯರ್‌ - ವಿಜೇತೆ ಟೀಚೆರ್ ಅರೆಸ್ಟ್

Webdunia
ಬುಧವಾರ, 21 ಸೆಪ್ಟಂಬರ್ 2022 (15:44 IST)
ಮಹಿಳಾ ಶಿಕ್ಷಕಿ ಸುಮಾರು 20 ವರ್ಷಗಳಿಂದ ಇದೇ ಶಾಲೆಯಲ್ಲಿ ಮಕ್ಕಳಿಗೆ ಪಾಠ ಮಾಡುತ್ತಿದ್ದರು. ಟೀಚರ್‌ ಆಫ್‌ ದ ಇಯರ್‌ ಪ್ರಶಸ್ತಿಯನ್ನೂ ಪಡೆದಿದ್ದರು. ಇದು ಅಮೆರಿಕದಲ್ಲಿ ನಡೆದಿರುವ ಪ್ರಕರಣವಾಗಿದೆ. ಆರೋಪಿ ಮಹಿಳಾ ಶಿಕ್ಷಕಿಯ ಹೆಸರು ಲಿಯಾ ಕ್ವೀನ್. ಆಕೆಗೆ ಈಗ 43 ವರ್ಷ. ಜೆಂಟ್ರಿ ಇಂಟರ್ ಮೀಡಿಯೇಟ್ ಶಾಲೆಯ ಶಿಕ್ಷಕಿಯಾಗಿರುವ ಲಿಯಾ ಅವರನ್ನು ಸೆಪ್ಟೆಂಬರ್ 15 ರಂದು ಬಂಧಿಸಲಾಯಿತು. ಅಕ್ರಮ ಪದಾರ್ಥಗಳನ್ನು ಸೇವಿಸಿದ ಆರೋಪವೂ ಅವರ ಮೇಲಿದೆ. ಅಚ್ಚರಿಯ ವಿಚಾರವೆಂದರೆ, ಈ ಪ್ರಕರಣ ನಡೆದು 12 ವರ್ಷಗಳಾಗಿವೆ. ಸುಮಾರು 40 ಲಕ್ಷ ರೂಪಾಯಿಗಳನ್ನು ಪಾವತಿಸಿದ ನಂತರ, ಲಿಯಾ ಕೂಡ ಸೆಪ್ಟೆಂಬರ್ 17 ರಂದು ಜಾಮೀನಿನ ಮೇಲೆ ಜೈಲಿನಿಂದ ಹೊರಬಂದರು. ಜೆಂಟ್ರಿ ಪೊಲೀಸ್ ಇಲಾಖೆಯ ಪ್ರಕಾರ, 2010 ರ ಘಟನೆಯ ಮೇಲೆ ಲೇಹ್ ಅವರನ್ನು ಬಂಧಿಸಲಾಯಿತು. ಆಗ ಈಕೆ 17 ವರ್ಷದ ವಿದ್ಯಾರ್ಥಿಯೊಂದಿಗೆ ಲೈಂಗಿಕ ಸಂಬಂಧ ಬೆಳೆಸಿದ್ದರು ಎನ್ನಲಾಗಿದ್ದು, ಇದೀಗ ಈ ವಿಷಯ ಬಹಿರಂಗವಾಗಿದೆ.
 
ಸಂತ್ರಸ್ತ ವಿದ್ಯಾರ್ಥಿಯ ಆರೋಪಕ್ಕೆ ಸಂಬಂಧಿಸಿದಂತೆ ಸಾಕಷ್ಟು ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ವಿದ್ಯಾರ್ಥಿಯ ಪೋಷಕರು, ಮಾಜಿ ಶಿಕ್ಷಕನೂ ಆಗಿರುವ ಲಿಯಾಳ ಮಾಜಿ ಪತಿಯಿಂದ ಪೊಲೀಸರು ಈ ಸಾಕ್ಷ್ಯವನ್ನು ಸಂಗ್ರಹಿಸಿದ್ದಾರೆ. ವಿದ್ಯಾರ್ಥಿಯನ್ನು ತನ್ನ ಮನೆಗೆ ಆಹ್ವಾನಿಸಿದ ಆರೋಪವೂ ಲಿಯಾಳ ಮೇಲಿದೆ. ಲಿಯಾ (Leah Queen) ಇತರ ಹಲವಾರು ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ಪೊಲೀಸರು ಈ ವಿಷಯದ ಬಗ್ಗೆ ಮುಂದೆ ಬರಲು ಇತರ ಸಂತ್ರಸ್ತರನ್ನು ಕೇಳಿಕೊಂಡಿದ್ದಾರೆ.
 
ಗ್ಯಾಂಟ್ರಿ ಪಬ್ಲಿಕ್ ಸ್ಕೂಲ್ಸ್ ಸೂಪರಿಂಟೆಂಡೆಂಟ್ ಟೆರ್ರಿ ಡಿಪೋಲಾ (Terry Depola) ಅವರು ಲಿಯಾ ಅವರನ್ನು ಕೆಲಸದಿಂದ ಅಮಾನತುಗೊಳಿಸಲಾಗಿದೆ ಎಂದು ಹೇಳಿದ್ದಾರೆ. ಲಿಯಾ ಜೆಂಟ್ರಿ ಶಾಲೆಯಲ್ಲಿ 20 ವರ್ಷಗಳಿಗೂ ಹೆಚ್ಚು ಕಾಲ ಬೋಧಿಸುತ್ತಿದ್ದರು ಎಂದು ವರದಿಯಲ್ಲಿ ಹೇಳಲಾಗಿದೆ. 2014-15ನೇ ಸಾಲಿನಲ್ಲಿ ಲಿಯಾ ಅವರಿಗೆ ವರ್ಷದ ಶಿಕ್ಷಕಿ ಪ್ರಶಸ್ತಿಯೂ ಲಭಿಸಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಅವರು ಅರ್ಕಾನ್ಸಾಸ್ ಅಸೋಸಿಯೇಶನ್ ಆಫ್ ಹೆಲ್ತ್, ಫಿಸಿಕಲ್ ಎಜುಕೇಶನ್, ರಿಕ್ರಿಯೇಶನ್ ಮತ್ತು ಡ್ಯಾನ್ಸ್‌ನಿಂದ ಈ ಪ್ರಶಸ್ತಿಯನ್ನು ಪಡೆದಿದ್ದರು.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ