Select Your Language

Notifications

webdunia
webdunia
webdunia
webdunia

ಅಪ್ರಾಪ್ತೆಗೆ ಕಾಮಪಾಠ ಹೇಳಿಕೊಟ್ಟು ಎಸ್ಕೇಪ್ ಆದ ಶಿಕ್ಷಕ

ಅಪ್ರಾಪ್ತೆಗೆ ಕಾಮಪಾಠ ಹೇಳಿಕೊಟ್ಟು ಎಸ್ಕೇಪ್ ಆದ ಶಿಕ್ಷಕ
ತಿರುವನಂತಪುರಂ , ಸೋಮವಾರ, 26 ಆಗಸ್ಟ್ 2019 (17:26 IST)
ಅವಳಿಗೆ ವಯಸ್ಸಲ್ಲದ ವಯಸ್ಸು. ಇನ್ನೂ ಪ್ರಾಥಮಿಕ ಶಾಲೆಯನ್ನೇ ಮುಗಿಸಿಲ್ಲ. ಸುಂದರ ಭವಿಷ್ಯ ಕಂಡಿದ್ದ ಬಾಲಕಿಯ ಬಾಳಲ್ಲಿ ದಾರಿ ತೋರ ಬೇಕಿರೋ ಶಿಕ್ಷಕನೇ ತಪ್ಪು ಹಾದಿ ತೋರಿಸಿದ್ದಾನೆ. ಪರಿಣಾಮ ಈಗ ಆಕೆಯ ಬಾಳು ನರಕದಂತಾಗಿದೆ.

ಅಪ್ರಾಪ್ತೆ ಬಾಲಕಿಯೊಬ್ಬಳಿಗೆ ಶಿಕ್ಷಕನೊಬ್ಬ ಕಾಮಪಾಠ ಹೇಳಿಕೊಟ್ಟು ತನ್ನ ಕಾಮಪುರಾಣ ಬಯಲಾಗುತ್ತಿದ್ದಂತೆ ಪರಾರಿಯಾಗಿದ್ದಾನೆ.

13 ವರ್ಷದ ಬಾಲಕಿಯನ್ನು ಎರಡ್ಮೂರು ತಿಂಗಳಿಂದ ನಿರಂತವಾಗಿ ಅತ್ಯಾಚಾರ ನಡೆಸಿರೋ ಶಿಕ್ಷಕನು, ಆ ಬಾಲಕಿ ಗರ್ಭಿಣಿಯಾಗಿದ್ದಾಳೆ ಅನ್ನೋ ವಿಷಯ ತಿಳಿದು ಓಡಿ ಹೋಗಿದ್ದಾನೆ.

ಅಪ್ರಾಪ್ತೆ ಹೊಟ್ಟೆ ನೋವೆಂದು ಒದ್ದಾಡುತ್ತಿದ್ದಳು. ಆಗ ಮನೆಮಂದಿ ಆಕೆಯನ್ನು ಆಸ್ಪತ್ರೆಗೆ ತೋರಿಸಿದ್ದಾರೆ. ಆ ಬಾಲಕಿ ಗರ್ಭಿಣಿಯಾಗಿರೋ ವಿಷಯ ಹಾಗೂ ಇದಕ್ಕೆ ಶಿಕ್ಷಕನೇ ಕಾರಣ ಅನ್ನೋದು ಬಹಿರಂಗಗೊಂಡಿದೆ.

ಏತನ್ಮಧ್ಯೆ ಬಾಲಕಿಯೊಂದಿಗೆ ಲವ್ವಿ ಡವ್ವಿ ನಡೆಸಿ ಆಕೆಯ ಗರ್ಭ ಧರಿಸೋಕೆ ಕಾರಣವಾಗಿರೋ ಶಿಕ್ಷಕನು ಪರಾರಿಯಾಗಿದ್ದಾನೆ. ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಘಟನೆ ನಡೆದಿದ್ದು,  ಆರೋಪಿ ಶಿಕ್ಷಕನ ವಿರುದ್ಧ ಕೇಸ್ ದಾಖಲಾಗಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಇಂದಿರಾ ಕ್ಯಾಂಟೀನ್ ಗಳಿಗೆ ಸಿಎಂ ಯಡಿಯೂರಪ್ಪ ಮಾಡಿದ್ದೇನು?