ಉಕ್ರೇನ್ ಮೇಲೆ ಯುದ್ಧ ಸಾರಿರುವ ರಷ್ಯಾದ ಮೇಲೆ ಈಗಾಗಲೇ ಜಾಗತಿಕ ಕಂಪನಿಗಳು ನಿರ್ಬಂಧ ವಿಧಿಸಿವೆ.. ಬಹುರಾಷ್ಟ್ರೀಯ ಕಂಪನಿಗಳು ರಷ್ಯಾದಿಂದ ಅಂತರ ಕಾಯ್ದುಕೊಳ್ಳುತ್ತಿದೆ.. ಈಗ ಅದೇ ಪಟ್ಟಿಗೆ ಭಾರತದ ಬಹುರಾಷ್ಟ್ರೀಯ ಕಂಪನಿ ಟಾಟಾ ಗ್ರೂಪ್ ಕೂಡ ಸೇರ್ಪಡೆಯಾಗಿದೆ.. ಉಕ್ರೇನ್‌ನೊಂದಿಗೆ ನಡೆಯುತ್ತಿರುವ ಯುದ್ಧದ ಹಿನ್ನೆಲೆ ಭಾರತದ ಬಹುರಾಷ್ಟ್ರೀಯ ಉಕ್ಕು ತಯಾರಕ ಟಾಟಾ ಸ್ಟೀಲ್ ರಷ್ಯಾದೊಂದಿಗೆ ವ್ಯಾಪಾರ ಮಾಡುವುದನ್ನು ನಿಲ್ಲಿಸುವುದಾಗಿ ಘೋಷಿಸಿದೆ.. ಟಾಟಾ ಸ್ಟೀಲ್, ರಷ್ಯಾದಲ್ಲಿ ಯಾವುದೇ ಕಾರ್ಯಾಚರಣೆ ಅಥವಾ ಉದ್ಯೋಗಿಗಳನ್ನು ಹೊಂದಿಲ್ಲ.. ನಾವು ರಷ್ಯಾದೊಂದಿಗೆ ವ್ಯಾಪಾರ ಮಾಡುವುದನ್ನು ನಿಲ್ಲಿಸಲು ಪ್ರಜ್ಞಾಪೂರ್ವಕ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ ಎಂದು ಟಾಟಾ ಸ್ಟೀಲ್ ವಕ್ತಾರರು ತಿಳಿಸಿದ್ದಾರೆ.