Publish Date: Fri, 08 Mar 2019 (18:32 IST)
Updated Date: Fri, 08 Mar 2019 (18:34 IST)
ಗ್ರೇಡ್ 2 ತಹಶೀಲ್ದಾರನೊಬ್ಬನ ಕರ್ಮಕಾಂಡ ಬಯಲಾಗಿದೆ. ಕಛೇರಿ ಮಹಿಳಾ ಸಿಬ್ಬಂದಿ ಜತೆ ಅಸಭ್ಯ ವರ್ತನೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
ತನ್ನ ಕಛೇರಿ ಮಹಿಳಾ ಸಿಬ್ಬಂದಿಗಳಿಗೆ ಲೈಂಗಿಕ ಕಿರುಕುಳ ನೀಡುತ್ತಿರುವ ತಹಶಿಲ್ದಾರನ ಆಟ ಈಗ ಬಯಲಿಗೆ ಬಿದ್ದಿದೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯ ಗ್ರೇಡ್ 2 ತಹಶಿಲ್ದಾರ ಡಿ.ಎಸ್. ಜಮಾದಾರ್ ಮಹಿಳೆಯರ ಜೋತೆ ಅಸಭ್ಯ ವರ್ತನೆ ಮಾಡುತ್ತಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ತನ್ನ ಕುರ್ಚಿಯ ಮೇಲೆ ಕುಳಿತು ಮಹಿಳೆಯರಿಗೆ ತನ್ನ ಗುಪ್ತ ಅಂಗಗಳನ್ನ ಪ್ರದರ್ಶನವನ್ನು ಈ ಕಾಮುಕ ತಹಸೀಲ್ದಾರ್ ಮಾಡುತ್ತಿದ್ದಾನಂತೆ. ಮಹಿಳಾ ಸಿಬ್ಬಂದಿ ಈತನ ಕ್ಯಾಬಿನ್ ಗೆ ಹೋದ್ರೆ ಸಾಕು ಗುಪ್ತ ಅಂಗಗಾಗಳನ್ನ ಒಪನ್ ಆಗಿ ತೋರಿಸುತ್ತಾನಂತೆ. ನಿನ್ನ ನಂಬರ ಕೊಡು ನಾನು ಹೇಳಿದ ಹಾಗೆ ಕೇಳು ಅಂತೆಲ್ಲಾ ಮಹಿಳಾ ಸಿಬ್ಬಂದಿಗೆ ಹೆದರಿಸುತ್ತಾನಂತೆ.
ಈತನ ಮಾತು ಕೇಳದೇ ಹೋದರೆ ವಿನಾಕಾರಣ ಕಿರಿಕ್ ಮಾಡುತ್ತಾನೆ ಈ ಕಾಮುಕ ಅಂತ ಅಲ್ಲಿನ ಸಿಬ್ಬಂದಿ ಜನರ ಮುಂದೆ ಗೋಳು ತೋಡಿಕೊಂಡಿದ್ದಾರೆ.
ಕಾಮುಕ ತಹಶಿಲ್ದಾರ ಕಿರಿಕಿರಿಗೆ ಬೇಸತ್ತ ಕೆಳ ಹಂತದ ಮಹಿಳಾ ಸಿಬ್ಬಂದಿ ಸಮಸ್ಯೆ ಹೇಳಿಕೊಳ್ಳೊಕು ಆಗದೆ ಪರದಾಡುತ್ತಿದ್ದಾರೆ. ಆದರೆ ಕಾಮುಕ ತಹಸೀಲ್ದಾರ್ ತನ್ನ ಗುಪ್ತಾಂಗ ಪ್ರದರ್ಶಿರುವ ಫೋಟೋಗಳು ವೈರಲ್ ಆಗಿವೆ. ತಹಶೀಲ್ದಾರ ವರ್ತನೆಗೆ ಸಾರ್ವಜನಿಕರ ಆಕ್ರೋಶ ವ್ಯಕ್ತವಾಗಿದೆ.