Publish Date: Fri, 03 Mar 2017 (07:38 IST)
Updated Date: Fri, 03 Mar 2017 (07:41 IST)
ತಹಶೀಲ್ದಾರ್ ಹತ್ಯೆಗೆ ಯತ್ನಿಸಿದ್ದ ಜೆಸಿಬಿ ಚಾಲಕನನ್ನು ಬಂಧಿಸಲಾಗಿದೆ.
ಗಣೇಶ್ ಬಂಧಿತ ಆರೋಪಿ. ಘಟನೆ ಕುರಿತು ಕನಕಪುರ ತಹಶೀಲ್ದಾರ್ ಆರ್. ಯೋಗಾನಂದ ಅವರು ಹಾರೋಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ ಬಳಿಕ ಆರೋಪಿಯನ್ನು ಬಂಧಿಸಲಾಯಿತು.
ರಾಮನಗರದ ತಟ್ಟೆಕೆರೆ ಗ್ರಾಮದ ಜಮೀನೊಂದರಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ ಎಂಬ ಕುರಿತು ಖಚಿತ ಮಾಹಿತಿ ಪಡೆದ ಕನಕಪುರ ತಹಶೀಲ್ದಾರ್ ಯೋಗಾನಂದ ತಮ್ಮ ಸಿಬ್ಬಂದಿ ಜತೆಯಲ್ಲಿ ಸ್ಥಳಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ಜೆಸಿಬಿ ಚಾಲಕ, ಯೋಗಾನಂದ ಅವರ ಕಾರ್‌ಗೆ ಜೆಸಿಬಿ ಗುದ್ದಿಸಿ ಅವರ ಕೊಲೆಗೆ ಯತ್ನಿಸಿದ್ದ. ತಕ್ಷಣ ಕಾರ್‌ನಿಂದ ಹಾರಿದ ತಹಶೀಲ್ದಾರ್ ಮತ್ತು ಸಿಬ್ಬಂದಿ ಅಪಾಯದಿಂದ ಪಾರಾಗಿದ್ದರು. ಬಳಿಕ ಎಸಿಬಿ ಚಾಲಕನ ಮೇಲೆ ಕಲ್ಲಿನಿಂದ ದಾಳಿ ನಡೆಸಿದ್ದಾರೆ. ತಕ್ಷಣ ಆತ ಸ್ಥಳದಿಂದ ಪರಾರಿಯಾಗಿದ್ದ.
ಮರಳು ಫಿಲ್ಟರ್ ಕಾರ್ಯವು ನಡೆಯುತ್ತಿದ್ದ ಜಮೀನು ಸ್ಥಳೀಯ ಟಿಎಪಿಸಿಎಂಎಸ್‌ನ ಉಪಾಧ್ಯಕ್ಷ ನಂಜೇಗೌಡ ಎಂಬುವರಿಗೆ ಸೇರಿದ್ದು ಎಂದು ತಿಳಿದು ಬಂದಿದೆ.