Select Your Language

Notifications

webdunia
webdunia
webdunia
webdunia

ನಿಮ್ಮಪ್ಪನ ಮನೆ ಆಸ್ತಿ ಕೇಳ್ತಿಲ್ಲ ಎಂದ ಸ್ವಾಮೀಜಿ

ನಿಮ್ಮಪ್ಪನ ಮನೆ ಆಸ್ತಿ ಕೇಳ್ತಿಲ್ಲ ಎಂದ ಸ್ವಾಮೀಜಿ
ಹಾವೇರಿ , ಬುಧವಾರ, 14 ಅಕ್ಟೋಬರ್ 2020 (15:00 IST)
ಮೀಸಲಾತಿ ನಿಮ್ಮಪ್ಪನ ಮನೆ ಆಸ್ತಿಯಲ್ಲ. ನಾವು ನಿಮ್ಮಪ್ಪನ ಮನೆ ಆಸ್ತಿ ಕೇಳ್ತಿಲ್ಲ ಎಂದು ಸ್ವಾಮೀಜಿಯೊಬ್ಬರು ಗುಡುಗಿದ್ದಾರೆ.

ಮೀಸಲಾತಿ ನಮ್ಮ ಸಂವಿಧಾನಬದ್ಧ ಹಕ್ಕು. ಈ ವಿಚಾರದಲ್ಲಿ ನಮ್ಮ ಕಿವಿಗೆ ಹೂವು ಇಡ್ತಿದ್ದಾರೆ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿ.ಎಸ್‌.ಯಡಿಯೂರಪ್ಪ ಅವರು ಮೀಸಲಾತಿ ಹೆಚ್ಚಳದ ಬಗ್ಗೆ ಮಾತು ಕೊಟ್ಟಿದ್ದರು. ಅಧಿಕಾರಕ್ಕೆ ಬಂದ ಮೇಲೆ ಕೊಟ್ಟ ಮಾತು ಮರೆತಿದ್ದಾರೆ. ವಾಲ್ಮೀಕಿ ಸಮುದಾಯದ ಬೇಡಿಕೆ ಈಡೇರಿಸದಿದ್ದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ತಕ್ಕ ಪಾಠ ಕಲಿಸುತ್ತೇವೆ. ಜೈಲಿನಲ್ಲಿಟ್ಟರೂ ನಮ್ಮ ಹಕ್ಕಿಗಾಗಿ ಹೋರಾಟ ಮಾಡುತ್ತೇವೆ ಎಂದಿದ್ದಾರೆ.

ಬೇಡರ ಶಾಪ ತಟ್ಟಿ ಸಮ್ಮಿಶ್ರ ಸರ್ಕಾರ ಅಧಿಕಾರ ಕಳೆದುಕೊಂಡಿತು. ಬಿಜೆಪಿಯವರ ಚರ್ಮ ದಪ್ಪ ಇದೆ. ಈಗ ಅವರಿಗೆ ಚಾಟಿ ಬೀಸಬೇಕಿದೆ ಎಂದಿದ್ದಾರೆ.  



Share this Story:

Follow Webdunia kannada

ಮುಂದಿನ ಸುದ್ದಿ

ಆರ್.ಆರ್.ನಗರ ಉಪಚುನಾವಣೆ ಸಮರ ; ಇಂದು ಕಮಲ, ದಳ, ಕೈ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ