Publish Date: Wed, 14 Oct 2020 (11:22 IST)
Updated Date: Wed, 14 Oct 2020 (11:25 IST)
ಬೆಂಗಳೂರು : ಆರ್.ಆರ್.ನಗರ ಉಪಚುನಾವಣೆ ಸಮರ ರಂಗೇರಿದ್ದು, ಇಂದು ಕಮಲ, ದಳ, ಕೈ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲಿದ್ದಾರೆ.
ಬಿಜೆಪಿ ಅಭ್ಯರ್ಥಿ ಮುನಿರತ್ನ ನಾಮಪತ್ರ ಸಲ್ಲಿಕೆ ಮಾಡಲಿದ್ದು, ಮುನಿರತ್ನ ಅವರಿಗೆ ಡಿಸಿಎಂ ಅಶ್ವತ್ಥ್ ನಾರಾಯಣ್, ಅಶೋಕ್, ಸುಧಾಕರ್, ಭೈರತಿ ಬಸವರಾಜ್ ಸಾಥ್ ನೀಡಲಿದ್ದಾರೆ. ಇಂದು ಆರ್.ಆರ್.ನಗರ ಬಿಬಿಎಂಪಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಕೆ ಮಾಡಲಾಗುವುದು ಎನ್ನಲಾಗಿದೆ.