Select Your Language

Notifications

webdunia
webdunia
webdunia
webdunia

ಸುಪ್ರೀಂಕೋರ್ಟ್ ಆದೇಶ: ಮಾಜಿ ಸಿಎಂ ಧರ್ಮಸಿಂಗ್, ಕುಮಾರಸ್ವಾಮಿಗೆ ಸಂಕಷ್ಟ

ಸುಪ್ರೀಂಕೋರ್ಟ್ ಆದೇಶ: ಮಾಜಿ ಸಿಎಂ ಧರ್ಮಸಿಂಗ್, ಕುಮಾರಸ್ವಾಮಿಗೆ ಸಂಕಷ್ಟ
ಬೆಂಗಳೂರು , ಬುಧವಾರ, 29 ಮಾರ್ಚ್ 2017 (16:24 IST)
ಮೀಸಲು ಪಟ್ಟಿಯಿಂದ ಅರಣ್ಯಭೂಮಿ ಕೈ ಬಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ತನಿಖೆ ನಡೆಸುವಂತೆ ಸುಪ್ರೀಂಕೋರ್ಟ್ ಆದೇಶಿಸಿದೆ.
 
ಮಾಜಿ ಮುಖ್ಯಮಂತ್ರಿಗಳಾದ ಧರ್ಮಸಿಂಗ್, ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ 11 ಅಧಿಕಾರಿಗಳ ವಿರುದ್ಧ ತನಿಖೆ ನಡೆಸಿ ಮೂರು ತಿಂಗಳಲ್ಲಿ ತನಿಖಾ ಪ್ರಗತಿ ವರದಿ ಸಲ್ಲಿಸಲು ಆದೇಶ ನೀಡಿದೆ.
 
ಅಧಿಕಾರಿಗಳಾದ ಡಾ.ಬಸಪ್ಪ ರೆಡ್ಡಿ, ಜೀಜಾಬಾಯಿ ಹರಿಸಿಂಗ್, ಗಂಗಾರಾಮ್ ಬಡೇರಿಯಾ, ಬಿ.ಉಮೇಶ್, ಆರ್. ಪೆರುಮಾಳ್, ಡಿ.ಎಸ್ ಅಶ್ವಥ್, ಕೆ.ಎಸ್.ಮಂಜುನಾಥ್. ಮಹೇಂದ್ರ ಜೈನ್, ಎಂ.ರಾಮಪ್ಪ, ಶಂಕರಲಿಂಗಯ್ಯ, ಶ್ರೀನಿವಾಸ್ ವಿರುದ್ಧ ತನಿಖೆ ನಡೆಸುವಂತೆ ಕೋರ್ಟ್ ಆದೇಶಿಸಿದೆ.  
 
ಮಾಜಿ ಸಿಎಂ ಕೃಷ್ಣಗಿದ್ದ ತಡೆಯಾಜ್ಞೆ ಮುಂದುವರಿಯಲಿದ್ದು, ಅವರನ್ನು ಬಿಟ್ಟು ಮಾಜಿ ಮುಖ್ಯಮಂತ್ರಿಗಳಾದ ಧರ್ಮಸಿಂಗ್, ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ 11 ಅಧಿಕಾರಿಗಳ ವಿರುದ್ಧ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ನಿರ್ದೇಶನ ನೀಡಿದೆ.
 
ಮೀಸಲು ಪಟ್ಟಿಯಿಂದ ಅರಣ್ಯಭೂಮಿ ಕೈ ಬಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಳಹಂತದ ಯಾವುದೇ ಕೋರ್ಟ್ ತೀರ್ಪು ನೀಡುವಂತಿಲ್ಲ ಎಂದು ಸುಪ್ರೀಂಕೋರ್ಟ್ ಕಟ್ಟಾಜ್ಞೆ ಹೊರಡಿಸಿದೆ.
 
 ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿಗಳಾದ ರೋಹಿಂಟನ್ ನಾರಿಮನ್ ಮತ್ತು ಪಿನಾಕಿಚಂದ್ರ ಘೋಷ್ ನೇತೃತ್ವದ ಪೀಠ ಎಸ್‌ಐಟಿ ತನಿಖೆಗೆ ಆದೇಶ ನೀಡಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ತಾಯಿ ಚಾಮಂಡೇಶ್ವರಿ ಎಲ್ಲವನ್ನು ನೋಡಿಕೊಳ್ಳಲಿ: ಯಡಿಯೂರಪ್ಪ