Select Your Language

Notifications

webdunia
webdunia
webdunia
webdunia

ಮುಡಾ ಹಗರಣದಲ್ಲಿ ಸಿಎಂ ಪತ್ನಿಗೆ ರಿಲೀಫ್: ಇಡಿಗೆ ಸುಪ್ರೀಂಕೋರ್ಟ್ ಛೀಮಾರಿ

Siddaramaiah wife

Krishnaveni K

ನವದೆಹಲಿ , ಸೋಮವಾರ, 21 ಜುಲೈ 2025 (13:30 IST)
ನವದೆಹಲಿ: ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಪತ್ನಿ ಪಾರ್ವತಿಗೆ ಸುಪ್ರೀಂಕೋರ್ಟ್ ಬಿಗ್ ರಿಲೀಫ್ ನೀಡಿದೆ. ಜೊತೆಗೆ ಇಡಿಗೆ ಛೀಮಾರಿ ಹಾಕಿದೆ.

ಸಿಎಂ ಮತ್ತು ಪತ್ನಿ ವಿಚಾರಣೆಗೆ ಸುಪ್ರೀಂಕೋರ್ಟ್ ನಲ್ಲಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಬಿ.ಆರ್. ಗವಾಯಿ ಇಡಿಗೆ ಛೀಮಾರಿ ಹಾಕಿದೆ. ರಾಜಕೀಯ ಮತದಾರರ ಮುಂದೆ ಇರಲಿ. ಇದಕ್ಕೆ ನಿಮ್ಮನ್ನು ಯಾಕೆ ಬಳಸಿಕೊಳ್ಳಲಾಗುತ್ತಿದೆ ಎಂದು ಇಡಿಯನ್ನು ತರಾಟೆಗೆ ತೆಗೆದುಕೊಂಡಿದೆ.


ನಮ್ಮನ್ನು ಬಾಯಿ ತೆರೆಯಲು ಬಿಡಬೇಡಿ, ಕೆಲವು ಕಠಿಣ ಪದಗಳನ್ನು ಬಳಸಬೇಕಾಗುತ್ತದೆ ಎಂದು ಇಡಿಗೆ ಎಚ್ಚರಿಕೆಯನ್ನೂ ನೀಡಿದೆ. ಕರ್ನಾಟಕ ಹೈಕೋರ್ಟ್ ತೀರ್ಪಿನ  ವಿರುದ್ಧ ಇಡಿ ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿತ್ತು. ಆದರೆ ಈಗ ಇಡಿಗೆ ಛೀಮಾರಿ ಹಾಕಿ ಸಿಎಂ ಸಿದ್ದರಾಮಯ್ಯ ಹಾಗೂ ಅವರ ಪತ್ನಿ ಪಾರ್ವತಿ ವಿರುದ್ಧದ ವಿಚಾರಣೆ ರದ್ದುಗೊಳಿಸಿ ಆದೇಶ ನೀಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

Arecanut Price: ಅಡಿಕೆ, ಕಾಳುಮೆಣಸು ಇಂದಿನ ಮಾರುಕಟ್ಟೆ ದರ ಹೇಗಿದೆ