ಉರಿ ಬಿಸಿಲಿಗೂ ಕ್ಯಾರೇ ಎನ್ನದೆ ಹೆಜ್ಜೆ ಹಾಕಿದ ಬೆಂಬಲಿಗರು: ನಾಮಪತ್ರ ಸಲ್ಲಿಸಿದ ಬಿ.ವೈ. ರಾಘವೇಂದ್ರ

Sampriya
ಗುರುವಾರ, 18 ಏಪ್ರಿಲ್ 2024 (18:03 IST)
Photo Courtesy X
ಶಿವಮೊಗ್ಗ: ಲೋಕಸಭಾ ಚುನಾವಣೆಗೆ ಶಿವಮೊಗ್ಗ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಇಂದು ನಾಮಪತ್ರ ಸಲ್ಲಿಸಿದ್ದಾರೆ.

ಇನ್ನೂ ನಾಮಪತ್ರ ಸಲ್ಲಿಕೆಗೆ ಬಿಸಿಲು ಲೆಕ್ಕಿಸದೇ ಹೆಜ್ಜೆ ಹಾಕಿದ ಬೆಂಬಲಿಗರು, ಮೋದಿ ಮತ್ತೊಮ್ಮೆ ಎಂದು ಘೋಷಷಣೆಯನ್ನು ಕೂಗಿದರು. ಬಿಜೆಪಿ ಜೆಡಿಎಸ್ ಬೆಂಬಲಿಗರ ಬೃಹತ್ ಮೆರವಣಿಗೆ ಚುನಾವಣೆಗೆ ಮುನ್ನವೇ ಮೈತ್ರಿ ಪಕ್ಷಗಳ ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾಯಿತು.  

ಇಂದು ಮುಂಜಾನೆ ರಾಮಣ್ಣಶ್ರೇಷ್ಠಿ ಪಾರ್ಕ್ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ನಂತರ ಅಲ್ಲಿಂದಲೇ ಮೆರವಣಿಗೆಯಲ್ಲಿ ತೆರಳಿ ಗಾಂಧಿ ಬಜಾರ್, ಶಿವಪ್ಪನಾಯಕ ವೃತ್ತ, ಗೋಪಿ ಸರ್ಕಲ್ ಮೂಲಕ ಮೆರವಣಿಗೆ ಸಾಗಿ ಜಿಲ್ಲಾಧಿಕಾರಿ ತಲುಪಿದರು.

ಜಿಲ್ಲಾ ಚುನಾವಣಾಧಿಕಾರಿಯೂ ಅಗಿರುವ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರಿಗೆ ತಮ್ಮ ಉಮೇದುವಾರಿಕೆ ಸಲ್ಲಿಸಿದರು.

ಈ ಬಗ್ಗೆ ರಾಘವೇಂದ್ರ ಅವರು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಜೆಡಿಎಸ್ ಬೆಂಬಲಿತ ಬಿಜೆಪಿ ಅಭ್ಯರ್ಥಿಯಾಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ನಾಮಪತ್ರ ಸಲ್ಲಿಸಲಾಯಿತು.

ನನ್ನ ಪತ್ನಿ ಶ್ರೀಮತಿ ತೇಜಸ್ವಿನಿ ರಾಘವೇಂದ್ರ ಹಾಗೂ ಬಿಜೆಪಿ-ಜೆಡಿಎಸ್‌ ಮುಖಂಡರುಗಳಾದ ಶ್ರೀ @JnanendraAraga
  ಶ್ರೀ ಭಾನುಪ್ರಕಾಶ್, ಶ್ರಿ ರುದ್ರೇಗೌಡ, ಶ್ರೀ ಹರತಾಳು ಹಾಲಪ್ಪ, ಶ್ರೀಮತಿ ಶಾರದಾ ಪೂರ್ಯಾನಾಯ್ಕ್‌, ಶ್ರೀ ಕೆ.ಬಿ.ಅಶೋಕ್ ನಾಯ್ಕ್, ಶ್ರೀ @gantihole
 ಮತ್ತಿತರರು ಉಪಸ್ಥಿತರಿದ್ದರು.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನಂದಿನಿ ಬ್ರ್ಯಾಂಡ್‌ ಹೆಸರಿನಲ್ಲಿ ನಕಲಿ ತುಪ್ಪ‌ ಮಾರಾಟ ಜಾಲದ ಕಿಂಗ್‌ ಪಿನ್‌ ದಂಪತಿ ಸಿಸಿಬಿ ಬಲೆಗೆ

ಪಾಕ್‌ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಸಾವು ವದಂತಿ: ಅಡಿಯಾಲಾ ಜೈಲಿನ ಮುಂದೆ ಹೈಡ್ರಾಮಾ

ಈ ವಿಚಾರಕ್ಕೆ ರಾಹುಲ್, ಸೋನಿಯಾ ಭೇಟಿಯಾಗಬೇಕೆಂದ ಮಲ್ಲಿಕಾರ್ಜುನ ಖರ್ಗೆ

ದೆಹಲಿ ಸ್ಪೋಟ, ಇಂದು ಬಂಧಿಯಾಗಿರುವ ಆರೋಪಿಯ ಕೈವಾಡ ಕೇಳಿದ್ರೆ ಶಾಕ್ ಆಗುತ್ತೆ

ಪೋಕ್ಸೋ ಪ್ರಕರಣದಲ್ಲಿ ಮುರುಘಾಶ್ರೀ ಬಿಗ್‌ ರಿಲೀಫ್‌, ತೀರ್ಪು ಮಾಹಿತಿ ಇಲ್ಲಿದೆ

ಮುಂದಿನ ಸುದ್ದಿ
Show comments