Select Your Language

Notifications

webdunia
webdunia
webdunia
webdunia

ಬಿವೈ ರಾಘವೇಂದ್ರ ಗೆಲ್ಲಿಸಲು ಒಗ್ಗಟ್ಟಾದ ಮೂವರು ಮಾಜಿ ಸಿಎಂಗಳು

ಬಿವೈ ರಾಘವೇಂದ್ರ ಗೆಲ್ಲಿಸಲು ಒಗ್ಗಟ್ಟಾದ ಮೂವರು ಮಾಜಿ ಸಿಎಂಗಳು

Sampriya

ಬೆಂಗಳೂರು , ಗುರುವಾರ, 18 ಏಪ್ರಿಲ್ 2024 (17:40 IST)
Photo Courtesy X
ಬೆಂಗಳೂರು: ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ- ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಗಳು ಎಲ್ಲ 28 ಸ್ಥಾನಗಳಲ್ಲಿ ಗೆಲ್ಲಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಶಿವಮೊಗ್ಗದ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಅವರ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಇಂದು ನಡೆದ ಬೃಹತ್ ಸಭೆಯಲ್ಲಿ ಅವರು ಮಾತನಾಡಿದರು.

ಮನೆಮನೆಗೆ ತೆರಳಿ ಮೋದಿಜೀ ಅವರ ಜನಪರ ಯೋಜನೆಗಳನ್ನು ತಿಳಿಸಿ. ರಾಘವೇಂದ್ರರನ್ನು 3 ಲಕ್ಷಕ್ಕೂ ಹೆಚ್ಚು ಮತಗಳಿಂದ ಗೆಲ್ಲಿಸಿ ಎಂದು ಮನವಿ ಮಾಡಿದರು.

ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾತನಾಡಿ, ಎರಡು ರೈತ ಶಕ್ತಿಗಳು ರಾಜ್ಯದಲ್ಲಿ ಒಂದಾಗಿವೆ. ಹಣದ ಶಕ್ತಿ ಇದರ ಮುಂದೆ ಏನೂ ಅಲ್ಲ. ಕಾಂಗ್ರೆಸ್ಸಿನವರು ಹೊಸ ಗ್ಯಾರಂಟಿ ತಂದಿದ್ದಾರೆ. ಆದರೆ, ಅವರು ಆಡಳಿತ ಮಾಡಲು ಬೇಕಾದಷ್ಟು ಸ್ಥಾನಕ್ಕೆ ಸ್ಪರ್ಧಿಸಿಲ್ಲ. 35 ಅಂಕಕ್ಕೆ ಬೇಕಾದಷ್ಟು ಪ್ರಶ್ನೆ ಬಿಡಿಸದ ಕಾಂಗ್ರೆಸ್ ಪಕ್ಷ ಪಾಸಾಗಲು ಸಾಧ್ಯವೇ ಎಂದರು.

 ಕಾಂಗ್ರೆಸ್ ಫೇಲಾಗುವ, ಮೋಸ ಮಾಡುವ ಪಕ್ಷ ಎಂದು ಟೀಕಿಸಿದರು. ಕೋವಿಡ್ ಸಂದರ್ಭದಲ್ಲಿ 130 ಕೋಟಿ ಜನರ ಜೀವ ಉಳಿಸಿದ ಮೋದಿಜೀ ಅವರಿಗೆ ಕೃತಜ್ಞತೆ ಸಲ್ಲಿಸಲು ಅವರಿಗೆ ಮತ ಕೊಡಿ ಎಂದು ಮನವಿ ಮಾಡಿದರು.

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮಾತನಾಡಿ, ಇದು ರೈತವಿರೋಧಿ ಸರಕಾರ. ಈ ಸರಕಾರ ಪಿಕ್ ಪಾಕೆಟ್ ಸರಕಾರ ಎಂದು ಟೀಕಿಸಿದರು. ಕರ್ನಾಟಕದಲ್ಲಿ ಮೊದಲು 2.75 ಲಕ್ಷ ಸರಕಾರಿ ಹುದ್ದೆಗಳನ್ನು ಭರ್ತಿ ಮಾಡಿ ಎಂದು ಸವಾಲೆಸೆದರು. ಕಿಸಾನ್ ಸಮ್ಮಾನ್ ಯೋಜನೆಯಡಿ ಯಡಿಯೂರಪ್ಪ ಅವರು ಆರಂಭಿಸಿದ್ದ 4 ಸಾವಿರ ನೀಡುವುದನ್ನು ಈ ಸರಕಾರ ರದ್ದು ಮಾಡಿದೆ ಎಂದು ಆಕ್ಷೇಪಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತದ ಪ್ರಸಿದ್ಧ 2 ದೇವಾಲಯಗಳಿಗೆ 5 ಕೋಟಿ ದೇಣಿಗೆ ನೀಡಿದ ಅನಂತ್ ಅಂಬಾನಿ