ಮಂಡ್ಯ: ಅಧಿಕಾರಿಗಳು, ಶಾಸಕರ ಜೊತೆಗಿನ ಸಭೆಯಲ್ಲಿ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಗರಂ ಆದ ಘಟನೆ ನಡೆದಿದೆ.
									
										
								
																	
ಸಭೆಯಲ್ಲಿ ಗಣಿಗಾರಿಕೆ ಕುರಿತು ಮಾತು ಬಂತು. ಈ ವೇಳೆ ಶಾಸಕ ರವೀಂದ್ರ ಶ್ರೀಕಂಠಯ್ಯ ಸಕ್ರಮ ಗಣಿಗಾರಿಕೆಯವರಿಗೂ ತೊಂದರೆಯಾಗುತ್ತಿದೆ ಎಂದು ಆಪಾದಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸುಮಲತಾ ಅಕ್ರಮ ಗಣಿಗಾರಿಕೆ ವಿರುದ್ಧ ಮಾತ್ರ ನನ್ನ ಹೋರಾಟ. ಸಕ್ರಮ ಗಣಿಗಾರಿಕೆಗೆ ನನ್ನ ತಕರಾರಿಲ್ಲ ಎಂದರು.
									
			
			 
 			
 
 			
			                     
							
							
			        							
								
																	ಈ ವೇಳೆ ಗಣಿ ಅಧಿಕಾರಿ ವಿರುದ್ಧ ಗರಂ ಆದ ಸುಮಲತಾ ಸಾವಿರ ರೂ. ಕರೆಂಟ್ ಬಿಲ್ ಕಟ್ಟದೇ ಇದ್ರೂ ವಿದ್ಯುತ್ ಕಟ್ ಮಾಡ್ತಾರೆ. ಆದರೆ ನೀವು ಗಣಿಯಲ್ಲಿ ನೂರಾರು ಕೋಟಿ ರೂ. ತೆರಿಗೆ ಕಟ್ಟಿಲ್ಲವೆಂದರೂ ಸುಮ್ಮನಿರುವುದೇಕೆ? ಅಕ್ರಮ ಗಣಿಗಾರಿಕೆ ವಿರುದ್ಧ ಯಾಕೆ ಕ್ರಮ ಕೈಗೊಳ್ಳಲ್ಲ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.