Publish Date: Sat, 10 Jul 2021 (14:02 IST)
Updated Date: Sat, 10 Jul 2021 (14:05 IST)
ಸುಮಲತಾ ಅವರನ್ನು ಮಂಡ್ಯದಿಂದ ಓಡಿಸಲು ತೀರ್ಮಾನ ಮಾಡಿದ್ದಾರೆ. ಹಾಗಾಗಿ ಈ ರೀತಿ ಮಾಡುತ್ತಿದ್ದಾರೆ ಎಂದು ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಹೇಳಿದ್ದಾರೆ.
ಬೆಂಗಳೂರಿನ ತಮ್ಮ ನಿವಾಸಕ್ಕೆ ಜೆಡಿಎಸ್ ಕಾರ್ಯಕರ್ತರು ಮುತ್ತಿಗೆ ಹಾಕಿರುವುದಕ್ಕೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ನಾನು ಮಂಡ್ಯ ರಾಜಕಾರಣಕ್ಕೆ ಹೋಗಿಲ್ಲ. ನಾನು ಯಾವ ವಿಚಾರದಲ್ಲೂ ಮೂಗು ತೂರಿಸುವ ಕೆಲಸ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.
ಕುಮಾರಸ್ವಾಮಿ ವಿಚಾರದಲ್ಲಿ ಹೇಳಿಕೆ ಕೊಟ್ಟಿರೋದು ನಿಜ. ಮಾಧ್ಯಮಗಳು ಕೇಳುವಂತಹ ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ. ಅಂಬರೀಷ್ ಅವರ ಸ್ಮಾರಕ ವಿಚಾರದಲ್ಲಿ ಮಾತಾಡಿದ್ದೇನೆ. ಸ್ಮಾರಕ ಮಾಡೋದಕ್ಕೆ ಮುಂದಾಗಿದ್ದು ಕುಮಾರಸ್ವಾಮಿ. ಅಂಬರೀಷ್ ವಿಚಾರ ಬಂದಾಗ ಮಾತ್ರ ಮಾತಾನಾಡಿದ್ದೇನೆ ಎಂದು ಅವರು ಹೇಳಿದರು.
ಕುಮಾರಸ್ವಾಮಿ ಬಗ್ಗೆ ಮಾತಾನಾಡುವವರ ಬಗ್ಗೆ ಪ್ರತಿಭಟನೆ ಮಾಡಲ್ಲ. ಅದನ್ನ ಬಿಟ್ಟು ನನ್ನ ಮನೆ ಮುಂದೆ, ಅಂಬರೀಶ್ ಮನೆ ಮುಂದೆ ಪ್ರತಿಭಟನೆ ಮಾಡುತ್ತಾರೆ. ನಾನು ಮನಸ್ಸು ಮಾಡಿದರೆ ಎಂಪಿ ಹಾಗೂ ಎಂಎಲ್ ಎ ಆಗ್ತಿನಿ. ಆದರೆ ಅದು ನನಗೆ ಬೇಕಿಲ್ಲ. ಕುಮಾರಸ್ವಾಮಿಗೆ ನೋವು ಆಗೋತರ ಮಾತಾಡಿದ್ರೆ ಕ್ಷಮೆ ಕೇಳ್ತಿನಿ ಎಂದು ವಿವಾದಕ್ಕೆ ತೆರೆ ಎಳೆದರು.