Webdunia - Bharat's app for daily news and videos

Install App

Suhas Shetty Case: ಹತ್ಯೆ ಹಿಂದೆ ಬಜ್ಪೆ ಹೆಡ್‌ ಕಾನ್‌ಸ್ಟೇಬಲ್‌ ಭಾಗಿಯಾಗಿರುವ ಶಂಕೆ

Sampriya
ಮಂಗಳವಾರ, 6 ಮೇ 2025 (18:55 IST)
ಬೆಂಗಳೂರು: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಹಿಂದೆ ಬಜ್ಪೆ ಠಾಣೆಯ ಹೆಡ್‌ಕಾನ್‌ಸ್ಟೇಬಲ್ ರಶೀದ್ ಕೂಡ ಭಾಗಿಯಾಗಿರುವ ಅನುಮಾನವನ್ನು ಬಿಜೆಪಿ ವ್ಯಕ್ತಪಡಿಸಿದೆ.

ಈ ಬಗ್ಗೆ ಬಿಜೆಪಿ ತನ್ನ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದೆ.

ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಹಿಂದೆ ನಿಷೇಧಿತ ಪಿಎಫ್‌ಐ ಸಂಘಟನೆಯ ಕೈವಾಡವಿದೆ. ಇದಕ್ಕಾಗಿ ವಿದೇಶದಿಂದ 50 ಲಕ್ಷ ರೂಪಾಯಿ ಹಣ ಹೂಡಿಕೆಯಾಗಿದೆ ಎಂಬ ಗಂಭೀರ ಆರೋಪಗಳು ಕೇಳಿ ಬರುತ್ತಿದೆ. ಒಂದು ತಿಂಗಳಿನಿಂದ ಸುಹಾಸ್ ಹಿಂದೆ ಬಿದ್ದಿದ್ದ ಬಜ್ಪೆ ಠಾಣೆಯ ಹೆಡ್ ಕಾನ್‌ಸ್ಟೇಬಲ್ ರಶೀದ್ ಕೂಡಾ ಈ ಪ್ರಕರಣದಲ್ಲಿ ಭಾಗಿಯಾಗಿರುವ ಅನುಮಾನ ವ್ಯಕ್ತವಾಗಿದೆ.


ಕೃತ್ಯಕ್ಕಾಗಿ ರೂ. 50 ಲಕ್ಷಕ್ಕೂ ಹೆಚ್ಚು ಮೊತ್ತದ ಹಣ ಹೂಡಿಕೆಯಾಗಿದ್ದು, ಇದರ ಹಿಂದೆ ದೊಡ್ಡ ಶಕ್ತಿ ಕೆಲಸ ಮಾಡಿದೆ. ಪಿಎಫ್‌ಐನ ಟಾರ್ಗೆಟೆಡ್ ಕಿಲ್ಲಿಂಗ್ ಈ ಪ್ರಕರಣದಲ್ಲೂ ನಡೆದಿದೆ. ಸುಖಾನಂದ ಶೆಟ್ಟಿ ಹತ್ಯೆ ಪ್ರಕರಣದ ಆರೋಪಿ ನೌಷಾದ್ ಈ ಪ್ರಕರಣಕ್ಕೆ ಫಂಡಿಂಗ್ ಮಾಡಿದ್ದಾನೆ ಎನ್ನಲಾಗಿದೆ. ಇದರಲ್ಲಿ ಎಂಟು ಜನರು ನೇರ ಭಾಗಿಯಾಗಿದರೆ, ನೂರಾರು ಜನ ಪರೋಕ್ಷವಾಗಿ ಭಾಗಿಯಾಗಿರುವ ಸಾಧ್ಯತೆಯಿದೆ. ಸುಹಾಸ್ ಚಲನವಲನದ ಮಾಹಿತಿದಾರರಿಂದ ಹಿಡಿದು ಕಾರು ಹತ್ತಿಸಿದ ಬುರ್ಖಾಧಾರಿ ಮಹಿಳೆಯ ವಿಚಾರಣೆ ಸಹ ನಡೆಸಬೇಕು. ಸುಹಾಸ್ ಕೊಲೆಯಾದ ಕೆಲ ನಿಮಿಷಗಳಲ್ಲಿ ದೇಶ - ವಿದೇಶಗಳಲ್ಲಿ ಕುಳಿತುಕೊಂಡು ಸಾಮಾಜಿಕ ಜಾಲತಾಣದಲ್ಲಿ ತೇಜೋವಧೆ ನಡೆಸುವ ಏಕರೀತಿಯ ಕಮೆಂಟ್‌ಗಳು ಬಂದಿವೆ. ಹಾಗಾಗಿ ಇದೊಂದು ವ್ಯವಸ್ಥಿತವಾಗಿ ಸಂಚು ರೂಪಿಸಿ ನಡೆಸಿದ ಭಯೋತ್ಪಾದನಾ ಕೃತ್ಯ.

ಕರ್ನಾಟಕದಲ್ಲಿ ಅತಿ ಹೆಚ್ಚು ‌ಮುಸ್ಲಿಮರು ಇರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಸ್ಲಾಮಿಕ್ ಮೂಲಭೂತವಾದವನ್ನು ಹೇರುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿದ್ದು, ಇದಕ್ಕೆ ಅಡ್ಡಿಯಾಗಿರುವ ಹಿಂದು ಕಾರ್ಯಕರ್ತರ ಸರಣಿ ಹತ್ಯೆಯಾಗುತ್ತಿದೆ. ಹಾಗಾಗಿ @INCKarnataka
 ಸರ್ಕಾರ ಈ ಪ್ರಕರಣದ ತನಿಖೆಯನ್ನು ಎನ್‌ಐಎಗೆ ಒಪ್ಪಿಸಬೇಕು. ಇಲ್ಲದಿದ್ದರೆ ಕರಾವಳಿ ಕರ್ನಾಟಕದಲ್ಲಿ ಶಾಂತಿ ನೆಲೆಸುವುದು ಅಸಾಧ್ಯ.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Pahalgam Attack: ಪಾಕ್‌ ಸರ್ಕಾರದ ನಡೆಗೆ ಛೀಮಾರಿ ಹಾಕಿದ ಪಾಕಿಸ್ತಾನದ ಧರ್ಮಗುರು, Video Viral

Janardhan Reddy: ಶಿಕ್ಷೆ ಕಡಿಮೆ ಮಾಡಿ ಎಂದು ಅಂಗಲಾಚಿದ ಜನಾರ್ಧನ ರೆಡ್ಡಿಗೆ ಕೋರ್ಟ್ ಹೇಳಿದ್ದೇನು: ಇನ್ನು ಜೈಲೂಟ ಫಿಕ್ಸ್

ಪಹಲ್ಗಾಮ್ ಗೆ ಇಂಟೆಲಿಜೆನ್ಸ್ ವರದಿ ಪಡೆದು ಮೋದಿ ಹೋಗಿರಲಿಲ್ಲ, ಸಾಮಾನ್ಯರ ಕತೆಯೇನು: ಮಲ್ಲಿಕಾರ್ಜುನ ಖರ್ಗೆ

Pahalgam Terror Attack: ಪಾಕ್ ವಿರುದ್ಧ ಪ್ರತಿದಾಳಿಗೆ ಕೇಂದ್ರದಿಂದ ಭಾರೀ ಸಿದ್ಧತೆ

ಶಬರಿಮಲೆಗೆ ಭೇಟಿ ನೀಡುವ ಮೊದಲ ರಾಷ್ಟ್ರಪತಿಯಾಗಲಿದ್ದಾರೆ ದ್ರೌ‍ಪದಿ ಮುರ್ಮು, ಪಾದಯಾತ್ರೆ ಮೂಲಕ ಭೇಟಿ

ಮುಂದಿನ ಸುದ್ದಿ
Show comments