Select Your Language

Notifications

webdunia
webdunia
webdunia
webdunia

ಬರ ಪೀಡಿತ ತಾಲೂಕುಗಳಲ್ಲಿ ಬರಗಾಲ ಪರಿಹಾರ ಕಾಮಗಾರಿಗಳ ಕ್ರಿಯಾಯೋಜನೆ ಸಲ್ಲಿಸಿ: ಸಚಿವರ ಸೂಚನೆ

ಬರ ಪೀಡಿತ ತಾಲೂಕುಗಳಲ್ಲಿ ಬರಗಾಲ ಪರಿಹಾರ ಕಾಮಗಾರಿಗಳ ಕ್ರಿಯಾಯೋಜನೆ ಸಲ್ಲಿಸಿ: ಸಚಿವರ ಸೂಚನೆ
ಕಲಬುರಗಿ , ಗುರುವಾರ, 13 ಸೆಪ್ಟಂಬರ್ 2018 (17:59 IST)
ಪ್ರತಿ ತಾಲೂಕಿನ ಟಾಸ್ಕ ಫೋರ್ಸ ಸಮಿತಿಗೆ 5 ಲಕ್ಷ ರೂ.ಗಳ ಅನುದಾನ ನೀಡಲಾಗಿದೆ. ತಕ್ಷಣ ಬರಗಾಲ ಪರಿಹಾರ ಕಾಮಗಾರಿಗಳ ಕ್ರೀಯೋಜನೆ ಸಿದ್ದಪಡಿಸಿ ಅನೂಮೋದನೆ ಪಡೆಯಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ತಿಳಿಸಿದ್ದಾರೆ.

ಕಲಬುರಗಿ ಜಿಲ್ಲೆಯ ಆಳಂದ ತಾಲೂಕು ಹೊರತುಪಡಿಸಿ ಇನ್ನುಳಿದ  ತಾಲೂಕುಗಳನ್ನು  ಬರಪಿಡಿತ ತಾಲೂಕುಗಳೆಂದು ಘೋಷಿಸಲಾಗಿದೆ. ಪ್ರತಿ ತಾಲೂಕಿನ ಟಾಸ್ಕ ಫೋರ್ಸ ಸಮಿತಿಗೆ 5 ಲಕ್ಷ ರೂ.ಗಳ ಅನುದಾನ ನೀಡಲಾಗಿದೆ. ತಕ್ಷಣ ಬರಗಾಲ ಪರಿಹಾರ ಕಾಮಗಾರಿಗಳ ಕ್ರೀಯಾಯೋಜನೆ ಸಿದ್ದಪಡಿಸಿ ಅನೂಮೋದನೆ ಪಡೆಯಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರೀಯಾಂಕ ಖರ್ಗೆ ಸೂಚಿಸಿದ್ದಾರೆ.

ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡ ತ್ರೈಮಾಸಿಕ ಕೆ.ಡಿ.ಪಿ. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಕೇಂದ್ರ ಸರ್ಕಾರದ ಎನ್.ಡಿ.ಆರ್.ಎಫ್. ನಿಯಮಗಳ ಪ್ರಕಾರ ಕೇಂದ್ರ ಸರ್ಕಾರವು  ಮಳೆಯ  ಕೊರತೆ ಹಾಗೂ ಬಿತ್ತನೆ ಪ್ರದೇಶದ ಆಧಾರದ ಮೇಲೆ ಬರಪಿಡಿತ ತಾಲೂಕುಗಳ ಘೋಷಣೆ ಮಾಡಿದೆ ಎಂದರು.

      ಲೋಕೊಪಯೋಗಿ ಇಲಾಖೆಯಲ್ಲಿ ಬಾಕಿಯಿರುವ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸಲು ಸಮಯ ನಿಗದಿಪಡಿಸಬೇಕು. ಆಯಾ ವಿಭಾಗದ ಅಧಿಕಾರಿಗಳು ಸಂಬಂಧಿಸಿದ ಶಾಸಕರಿಗೆ ಮತಕ್ಷೇತ್ರದಲ್ಲಿ ಕೈಗೊಂಡಿರುವ ಕಾಮಗಾರಿಗಳ ವಿವರ ನೀಡಬೇಕು. ನಿಗದಿತ ಸಮಯದಲ್ಲಿ ಕಾಮಗಾರಿ ಪೂರ್ಣಗೊಳಿಸದ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಿ ಕಾಮಗಾರಿಗಳಿಗೆ ಪುನಃ ಟೆಂಡರ್ ಕರೆಯಬೇಕು. ಜಿಲ್ಲೆಯಲ್ಲಿ ಹಮ್ಮಿಕೊಂಡಿರುವ ರೈಲ್ವೇ ಸೇತುವೆ ಕಾಮಗಾರಿಗಳಲ್ಲಿ ರೈಲ್ವೇ ಇಲಾಖೆಯ ತನ್ನ ಪಾಲಿನ ಕಾಮಗರಿಯನ್ನು ಪೂರ್ಣಗೊಳಿಸಿದ್ದು, ಲೋಕೋಪಯೊಗಿ ಇಲಾಖೆಯಿಂದ ಆದಷ್ಟು ಬೇಗ ಸಂಪರ್ಕ ರಸ್ತೆಗಳನ್ನು ಪೂರ್ಣಗೊಳಿಸಿ ಕಾಮಗಾರಿಯನ್ನು ಸಾರ್ವಜನಿಕ ಉಪಯೋಗಕ್ಕೆ ಸಿದ್ದಪಡಿಸಬೇಕು ಎಂದರು.




Share this Story:

Follow Webdunia kannada

ಮುಂದಿನ ಸುದ್ದಿ

ಕೈಗಾರಿಕಾ ಪ್ರದೇಶಕ್ಕೆ ಕೇಂದ್ರ ನೀತಿ ಆಯೋಗದ ಸದಸ್ಯ ಭೇಟಿ