Select Your Language

Notifications

webdunia
webdunia
webdunia
webdunia

ರಂಗಯಾತ್ರೆ ಮುಗಿಸಿದ ಸುಭದ್ರಮ್ಮ ಮನ್ಸೂರು

ರಂಗಯಾತ್ರೆ ಮುಗಿಸಿದ ಸುಭದ್ರಮ್ಮ ಮನ್ಸೂರು
ಬಳ್ಳಾರಿ , ಗುರುವಾರ, 16 ಜುಲೈ 2020 (15:42 IST)
ನಾಡಿನ ಹಿರಿಯ ರಂಗಭೂಮಿ ಕಲಾವಿದೆ, ಖ್ಯಾತ ಗಾಯಕಿ ಸುಭದ್ರಮ್ಮ ಮನ್ಸೂರ್ ತಡರಾತ್ರಿ ತಮ್ಮ ರಂಗಪಯಣ ಮುಗಿಸಿ ಜೀವನದ ನಾಟಕಕ್ಕೆ ತೆರೆ ಎಳೆದಿದ್ದಾರೆ.

 ಅವರಿಗೆ 81 ವರ್ಷ ವಯಸ್ಸಾಗಿತ್ತು. ಬಳ್ಳಾರಿ ನಗರದ  ರೇಡಿಯೋಪಾರ್ಕ್ ಪ್ರದೇಶದ ಮನೆಯಲ್ಲಿ ವಾಸವಾಗಿದ್ದ ಅವರು 11 ಗಂಟೆ ಸುಮಾರಿಗೆ ಉಸಿರಾಟದ ತೊಂದರೆ ಉಂಟಾಗಿದೆ. ಕೂಡಲೆ ಪರಿಚಯದವರೂ ಬಂದು ಅವರನ್ನು ಇಲ್ಲಿನ ವಿಮ್ಸ್ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಕೊನೆಯುಸಿರೆಳೆದಿದ್ದರು. ಅವರಿಗೆ ಇಬ್ಬರು ಪುತ್ರರು ಹಾಗೂ ಒಬ್ಬ ಪುತ್ರಿ ಇದ್ದಾರೆ. ಅವರ ಪತಿ ಮಲ್ಲಿಕಾರ್ಜುನ ಮನ್ಸೂರು ಅವರು ಈ ಮೊದಲೆ ಧೈವಾಧೀನರಾಗಿದ್ದರು.

ಚಿಕ್ಕಂದಿನಿಂದಲೇ ರಂಗಭೂಮಿಯಲ್ಲಿ ಬೆಳೆದು ಬಂದವರು, ಪೌರಾಣಿಕವಾಗಿ ರಕ್ತ ರಾತ್ರಿಯ ನಾಟಕದ ದ್ರೌಪದಿ ಪಾತ್ರ ಮತ್ತು ಸಾಮಾಜಿಕವಾಗಿ ಹೇಮರೆಡ್ಡಿ ಮಲ್ಲಮ್ಮನ ಪಾತ್ರ ಅಚ್ಚಳಿಯದೇ ಪ್ರೇಕ್ಷಕರ ಮನದಲ್ಲಿ ಎಂದೆಂದಿಗೂ ಇರುವಂತಹುದಾಗಿವೆ.

ಇನ್ನು ಅವರ ಸುಮಧುರ ಕಂಠದಿಂದ ವಚನಗಳ ಗಾಯನದಲ್ಲಿ  ಮೂಡಿ ಬರುತ್ತಿದ್ದ ಅಕ್ಕಮಹಾದೇವಿಯ 'ಬೆಟ್ಟದ ಮೇಲೊಂದು ಮನೆಯ ಮಾಡಿ' ಮತ್ತು ಹೇಮರೆಡ್ಡಿ ಮಲ್ಲಮ್ಮಳ ನಾಟಕದ 'ಜಯವೆಂದು ಬೆಳಗುವೆ ಮಲ್ಲಿಕಾರ್ಜುನನೆ" ಹಾಡುಗಳು ಎಂದಿಗೂ ಕೇಳುಗರ ಕರ್ಣದಲ್ಲಿ ಗುನುಗುತ್ತಲೇ ಇರುತ್ತವೆಂದರೆ ಆಶ್ಚರ್ಯವಲ್ಲ.

ಆಕಾಶವಾಣಿಯ ಎ ಗ್ರೇಡ್ ಕಲಾವಿದರಾಗಿದ್ದ ಅವರು ಸುಮಧುರ ಸುಗಮ ಸಂಗೀತದ ಹಾಡುಗಳು ಕೇಳದವರಿಲ್ಲ.
ಕಳೆದ ವರ್ಷದ ವರೆಗೂ ಅವರು ಬಣ್ಣಹಚ್ಚಿ ನಟನೆ ಮಾಡಿದವರು, 1939 ರಿಂದ ಆರಂಭವಾದ ಅವರ ಈ ಜಗತ್ತಿನ ಬದುಕಿನ ಪಯಣ 2020 ರಲ್ಲಿ ಕೊನೆಗೊಂಡಿದೆ.

ಹಂಪಿ ಕನ್ನಡ ವಿವಿಯ ನಾಡೋಜ, ವಿಜಯನಗರ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಯಲಯದ ಗೌರವ ಡಾಕ್ಟರೇಟ್, ರಾಜ್ಯೋತ್ಸವ, ನಾಟಕ ಅಕಾಡೆಮಿ, ಗುಬ್ಬಿ ವೀರಣ್ಣ ಪ್ರಶಸ್ತಿ ಸೇರಿದಂತೆ ಹತ್ತಾರು ಪ್ರಶಸ್ತಿಗಳನ್ನು ಅವರು ಪಡೆದಿದ್ದರು.

ಅವರ ಮನೆಯ ಬಳಿ ಪಾರ್ಥಿವ ಶರೀರವನ್ನು ಇಡಲಾಗಿದ್ದು ಇಂದು ಸಂಜೆ ಮಧ್ಯಾಹ್ನ 3 ಗಂಟೆಗೆ ನಗರದ ರೂಪನಗುಡಿ ರಸ್ತೆಯ ಹರಿಶ್ಚಂದ್ರಘಾಟನಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಹೋಂ ಕ್ವಾರಂಟೈನ್ ಬಿಟ್ಟು ಹೊರಬಂದವರಿಗೆ ಆಗಿದ್ದೇನು?