Select Your Language

Notifications

webdunia
webdunia
webdunia
webdunia

ವಿದ್ಯಾರ್ಥಿಗಳಿಗೆ ಹಳೆಯ ಪಾಸ್ ಬಳಕೆಗೆ ಕೆಎಸ್ಸಾರ್ಟಿಸಿ ಅವಕಾಶ

ವಿದ್ಯಾರ್ಥಿಗಳಿಗೆ ಹಳೆಯ ಪಾಸ್ ಬಳಕೆಗೆ ಕೆಎಸ್ಸಾರ್ಟಿಸಿ ಅವಕಾಶ
bengaluru , ಗುರುವಾರ, 26 ಆಗಸ್ಟ್ 2021 (22:46 IST)

ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ನಿಗಮವು ಪ್ರಸಕ್ತ ಸಾಲಿನ ವಿದ್ಯಾರ್ಥಿಗಳ ಉಚಿತ ಅಥವಾ ರಿಯಾಯಿತಿ ದರದ ಪಾಸ್ ಗಳನ್ನು ಆನ್ ಲೈನ್ ಮುಖಾಂತರ ನೀಡುತ್ತಿದ್ದು, ಮುಂದಿನ ತಿಂಗಳು 15 ರೊಳಗೆ ಅರ್ಜಿ ಸಲ್ಲಿಸಲು ಕೋರಿದೆ. 
 

9ನೇ ತರಗತಿಯಿಂದ 12 ನೇಯ ತರಗತಿಯವರೆಗೆ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ 2021-22ನೇ ಸಾಲಿನ ಭೌತಿಕ ತರಗತಿಗಳು ಪ್ರಾರಂಭವಾಗಿದ್ದು, ಸಾರಿಗೆ ನಿಗಮದ ವತಿಯಿಂದ ವಿದ್ಯಾರ್ಥಿ ಹಳೆಯ ಬಸ್ ಪಾಸುಗಳನ್ನು ಬಳಸಿ ಆಗಸ್ಟ್ 2021ರ ಅಂತ್ಯದವರೆಗೆ ಪ್ರಯಾಣಿಸಲು ಈ ಹಿಂದೆ ಅನುಮತಿಸಲಾಗಿತ್ತು. ಪ್ರಸಕ್ತ ವರ್ಷವೂ ಸಹ ಎಲ್ಲಾ ವಿದ್ಯಾರ್ಥಿಗಳು ಸೇವಾಸಿಂದು ಪೋರ್ಟಲ್ ಮುಖಾಂತರ ಬಸ್ ಪಾಸುಗಳನ್ನು ಪಡೆಯಬೇಕಿದ್ದು, ಆನ್ಲೈನ್ ಮುಕಾಂತರ ಅರ್ಜಿ ಸಲ್ಲಿಸಲು ಸಾರಿಗೆ ಸಂಸ್ಥೆ ಹೇಳಿದೆ.ಯವರೆಗೆ ಹಳೆಯ ಪಾಸ್ ಅಥವಾ ಶಾಲಾ ಕಾಲೇಜಿನ ಗುರುತಿನ ಚೀಟಿ ಬಳಸಿ ಉಚಿತವಾಗಿ ಪ್ರಯಾಣಿಸಬಹುದು ಎಂದು ಸಂಸ್ಥೆ ತಿಳಿಸಿದೆ.

ಪಾಸ್ ವಿತರಣೆಯ ತಂತ್ರಾಂಶವನ್ನು ಸಂಪೂರ್ಣ ಆನ್ಲೈನ್ ಮಾಡಿರುವುದರಿಂದ, ವಿದ್ಯಾರ್ಥಿಗಳಿಗೆ ಕಾಲಾವಕಾಶ ನೀಡಲಾಗಿದ್ದು, 2020-21 ಸಾಲಿನಲ್ಲಿ ಪಡೆದಿರುವ ವಿದ್ಯಾರ್ಥಿ ಬಸ್ ಪಾಸುಗಳನ್ನು ಬಳಸಿ ಪ್ರಯಾಣಿಸಲು ಹಾಗೂ ಕಳೆದ ಸಾಲಿನಲ್ಲಿ ವಿದ್ಯಾರ್ಥಿ ಬಸ್ ಪಾಸುಗಳನ್ನು ಪಡೆಯದಿರುವ ವಿದ್ಯಾರ್ಥಿಗಳು ಹೊಸದಾಗಿ ಶಾಲೆ ಅಥವಾ ಕಾಲೇಜಗಳಲ್ಲಿ ಪಾವತಿಸಿರುವ ರಶೀದಿ ಹಾಗೂ ವಿದ್ಯಾಸಂಸ್ಥೆಯ ಗುರುತಿನ ಚೀಟಿಯೊಂದಿಗೆ ಅರ್ಜಿ ಸಲ್ಲಿಸಬೇಕು ಎಂದು ಮಾಹಿತಿ ನೀಡಿದೆ.

ಸಂಬಂಧಪಟ್ಟ ಮಾರ್ಗದಲ್ಲಿ ಅಥವಾ ಹೊಸ ವಿಳಾಸದಲ್ಲಿರುವ ಶಾಲಾ ಕಾಲೇಜುಗಳ ವಿಳಾಸವನ್ನು ಆನ್ಲೈನ್ ಮುಕಾಂತರ ನಮೂದಿಸಿ ನಿಗಮದ ನಗರ, ಹೊರವಲಯ, ಸಾಮಾನ್ಯ ಹಾಗೂ ವೇಗದೂತ ಬಸ್ತುಗಳಲ್ಲಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಸಂಸ್ಥೆ ಹೇಳಿದೆ
ವಿದ್ಯಾರ್ಥಿಗಳು ಪಾಸ್ ಪಡೆಯಲು ಸೆಪ್ಟೆಂಬರ್ 15 ರೊಳಗೆ ನಿಯಮಾನುಸಾರ ಉಚಿತ ಅಥವಾ ರಿಯಾಯಿತಿ ಪಾಸುಗಳನ್ನು ಪಡೆಯಲು ಸೇವಾಸಿಂದು ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಲು ಸಂಸ್ಥೆ ಕೋರಿದೆ


Share this Story:

Follow Webdunia kannada

ಮುಂದಿನ ಸುದ್ದಿ

ನಿರ್ಜನ ಪ್ರದೇಶಕ್ಕೆ ಹೋಗಬಾರದು: ಆನಂದ್ ಸಿಂಗ್ ಅವಿವೇಕದ ಮಾತು