Webdunia - Bharat's app for daily news and videos

Install App

ಪ್ರತಿಷ್ಠಿತ ಶಾಲೆಗಳಲ್ಲಿ ಶಿಕ್ಷಕರ ಕೊರತೆ

Webdunia
ಮಂಗಳವಾರ, 31 ಆಗಸ್ಟ್ 2021 (17:29 IST)
ಬೆಂಗಳೂರು:ರಾಜ್ಯ ರಾಜಧಾನಿಯ ಪ್ರತಿಷ್ಠಿತ
ಶಾಲೆಗಳಲ್ಲಿ ಶಿಕ್ಷಕರ ಕೊರತೆ ಕಾಡ್ತಿದೆಯಂತೆ , ಸಿಲಿಕಾನ್ ಸಿಟಿಯ ಪ್ರತಿಷ್ಠಿತ ಶಾಲೆಗಳಾದ ವಿಬ್ಗಯರ್, ನಾರಾಯಣ ಇ - ಟೆಕ್ನೋ ಶಾಲೆ ಸೇರಿದಂತೆ ನಗರದ ಪ್ರತಿಷ್ಠಿತ ಶಾಲೆಗಳು ಶಿಕ್ಷಕರ ಕೊರತೆ ಅನುಭವಿಸುತ್ತಿವೆ.
ಅಂದ ಹಾಗೆ ಲಾಕ್ ಡೌನ್, ಕೋವಿಡ್  ಸಂದರ್ಭದಲ್ಲಿ ಶಿಕ್ಷಕರನ್ನ ಎಷ್ಟೋ ಖಾಸಗಿ ಶಾಲೆಗಳು ಕೆಲಸದಿಂದ ತೆಗೆದುಹಾಕಿದರು.ಕಾರಣವಿಲ್ಲದ ಕಾರಣಕ್ಕೆ ಟಾರ್ಮಿನೇಟ್ ಸಹ ಮಾಡಿದ್ರು. ಸಂಬಳ ಕೊಡಲು ಆಗದ ಖಾಸಗಿ ಶಾಲೆಗಳು ಶಿಕ್ಷಕರ ಉದ್ಯೋಗ ಕಿತ್ತುಕೊಂಡು ಶಿಕ್ಷಕರನ್ನ ಬೀದಿಪಾಲು ಮಾಡಿದರು.
ಸುಮಾರು 18 ತಿಂಗಳಿಂದ ಕೆಲಸವಿಲ್ಲದ ಶಿಕ್ಷಕರು ಈಗ ಬೇರೆ ಕೆಲಸವನ್ನ ಆವಲಂಬಿಸಿದ್ದಾರೆ. ಶಾಲೆಗೆ ಬನ್ನಿ ಅಂತಾ ಸ್ವತಃ ಖಾಸಗಿ ಶಾಲೆಯ ಆಡಳಿತ ಮಂಡಳಿಯವರು ಕರೆದ್ರು. ಶಿಕ್ಷಕರು ಮಾತ್ರ ಬರಲು ಓಲೆ ಎನ್ನುತ್ತಿದ್ದಾರೆ. ಇನ್ನೂ ಖಾಸಗಿ ಶಾಲೆಯಲ್ಲಿ ಉದ್ಯೋಗ ಭದ್ರತೆ ಇಲ್ಲ, ಕಡಿಮೆ ವೇತನ ಯಾಕೆ ಇರಬೇಕೆಂದು ಬಾವಿಸಿದ ಶಿಕ್ಷಕರು ಈಗ ಅನ್ಯಮಾರ್ಗವನ್ನ ಕಂಡುಕೊಂಡು ಸ್ವಂತ ಉದ್ಯೋಗವನ್ನ ಅವಲಂಬಿಸಿದ್ದಾರೆ. ಈಗ ಹೆಚ್ಚಿಗೆ ಶಾಲೆ ಕೊಡುವುದಾಗಿ ಖಾಸಗಿ ಶಾಲೆಯವರು ಆಹ್ವಾನಿಸಿದ್ರು ಶಿಕ್ಷಕರು ಮಾತ್ರ ಬರಲು ಒಪ್ಪುತ್ತಿಲ್ಲ.
ಶಿಕ್ಷಕರಿಲ್ಲದೇ ವಿದ್ಯಾರ್ಥಿಗಳಿಗೆ ಇನ್ನಿಲ್ಲದ ಸಮಸ್ಯೆಯಾಗುವುದಂತೂ ನಿಜ. ಇನ್ನಾದ್ರು ಶಿಕ್ಷಕರ ಉದ್ಯೋಗವನ್ನ ಖಾಸಗಿ ಶಾಲೆಯವರು ಏಕಾಏಕಿ ಕಸಿದುಕೊಳ್ಳುವ ಮುನ್ನ ಒಮ್ಮೆ ಚಿಂತಿಸಬೇಕಿದೆ

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments