Publish Date: Tue, 25 Sep 2018 (19:47 IST)
Updated Date: Tue, 25 Sep 2018 (19:55 IST)
ಹೆಚ್ಚುವರಿ ಶಿಕ್ಷಕರನ್ನ ವರ್ಗವಣೆ ಮಾಡಿರೋದರಿಂದ ಮಕ್ಕಳ ವಿದ್ಯಾಭ್ಯಾಸದಲ್ಲಿ ಕುಂಠಿತಗೊಳ್ಳುತ್ತಿದೆ ಎಂದು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಹಾಗೂ ಪೋಷಕರು ಶಾಲೆಗೆ ಬೀಗ ಜಡಿದು ವರ್ಗವಣೆ ಖಂಡಿಸಿ ಪ್ರತಿಭಟನೆ ಮಾಡಿರುವ ಘಟನೆ ನಡೆದಿದೆ.
ಚಿತ್ರದುರ್ಗ ತಾಲ್ಲೂಕಿನ ಬೀರಾವರ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಸರ್ಕಾರಿ ಶಾಲೆಯಲ್ಲಿ ಸುಮಾರು 87 ಜನ ವಿದ್ಯಾರ್ಥಿಗಳಿದ್ದು, ಐದು ಜನ ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ ವಿದ್ಯಾರ್ಥಿಗಳ ದಾಖಲಾತಿಗೆ ಅನುಗುಣವಾಗಿ ಹೆಚ್ಚುವರಿಯಾಗಿರುವ ಶಿಕ್ಷಕರನ್ನ ಬೇರೆಡೆಗೆ ಶಿಕ್ಷಣ ಇಲಾಖೆ ವರ್ಗಾವಣೆ ಮಾಡಿದೆ. ಆದ್ದರಿಂದ ಈಗ ಮಕ್ಕಳ ಕಲಿಕೆಯಲ್ಲಿ ಕುಂಠಿತ ಕಾಣಿಸುತ್ತಿದೆ ಎಂದು ಆರೋಪಿಸಲಾಗುತ್ತಿದೆ.
ವರ್ಗಾವಣೆಯಾಗಿರುವ ನಿರಂಜನ್ ಎಂಬ ಶಿಕ್ಷಕರನ್ನ ವಾಪಸ್ ಇದೇ ಶಾಲೆಗೆ ಕಳಿಸುವಂತೆ ಒತ್ತಾಯಿಸಿ ಶಾಲೆಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.