Select Your Language

Notifications

webdunia
webdunia
webdunia
webdunia

ಐ ಎಲ್ ಯು ಎಂದು ವಿದ್ಯಾರ್ಥಿನಿಗೆ ಎಸ್ಎಂಎಸ್ ಕಳಿಸಿದ ಶಿಕ್ಷಕ: ಪಾಲಕರಿಗೆ ವಿಷಯ ಗೊತ್ತಾದಾಗ ಪರಾರಿ

ಶಿಕ್ಷಕ
ಬಾಗಲಕೋಟೆ , ಶುಕ್ರವಾರ, 21 ಸೆಪ್ಟಂಬರ್ 2018 (16:45 IST)
ಶಿಕ್ಷಕನೊಬ್ಬ ಶಾಲಾ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿರುವ ಜೊತೆಗೆ ಅಸಭ್ಯವಾಗಿ ಮೆಸೇಜ್ ಮಾಡಿ ಪರಾರಿ ಆಗಿರುವ ಘಟನೆ ನಡೆದಿದೆ.

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಸರಕಾರಿ ಪದವಿಪೂರ್ವ ಕಾಲೇಜಿನ ಹೈಸ್ಕೂಲ್ ವಿಭಾಗದ ಹತ್ತನೇಯ ತರಗತಿಯಲ್ಲಿ ಅಧ್ಯಯನ ಮಾಡುತ್ತಿದ್ದ ವಿದ್ಯಾರ್ಥಿನಿಗೆ ಪ್ರತಿನಿತ್ಯ ಲೈಂಗಿಕ ಕಿರುಕಳ ನೀಡುತ್ತಿರುವ ಜೊತೆಗೆ ಮೊಬೈಲ್ ನಲ್ಲಿ ಐ ಲವ್ ಯು, ಕಾಲ್ ಮಿ, ಪ್ಲೀಜ್, ಅಪ್ಪು ಪ್ಲೀಜ್ ಮಾತಾಡ್ಬೇಕು ಎಂದು ಶಿಕ್ಷಕನೊಬ್ಬ ಎಸ್ ಎಮ್ ಎಸ್ ಕಳಿಸಿದ್ದಾನೆ. ಮಲ್ಲಪ್ಪ ಬಸವರಾಜ್ ಡಂಗಿ ಎಂಬ ಶಿಕ್ಷಕ ಇಂತಹ ಕೃತ್ಯ ಎಸಗಿದ್ದು, ಪಾಲಕರಿಗೆ ವಿಷಯ ತಿಳಿದ ತಕ್ಷಣ ಶಾಲೆಗೆ ಬಂದಿದ್ದಾರೆ. ಇನ್ನು ಶಿಕ್ಷಕನಿಗೆ ಸಾರ್ವಜನಿಕ ಸಮ್ಮುಖದಲ್ಲಿ ಥಳಿಸಬೇಕು ಎನ್ನುವಾಗಲೇ ಶಿಕ್ಷಕ ಡಂಗಿ ಅಲ್ಲಿಂದ ಪರಾರಿಯಾಗಿದ್ದಾನೆ.

ಸ್ಥಳೀಯರು ಶಾಲೆಯ ಮುಖ್ಯೋಪಾಧ್ಯಾಯರಿಗೆ ಈ ವಿಷಯ ತಿಳಿಸಿದ್ದಾರೆ. ಕೂಡಲೇ ಶಿಕ್ಷಕನ ವಿರುದ್ಧ ಕ್ರಮಕ್ಕಾಗಿ ಡಿಡಿಪಿಐ  ಗಮನಕ್ಕೆ ತಂದು ಶಿಕ್ಷಕ ಸೇವೆಯಿಂದ ಅಮಾನತ್ತು ಮಾಡಬೇಕು  ಆಗ್ರಹಿಸಿದ್ದಾರೆ.
ಇನ್ನು ಮುಖ್ಯೋಪಾಧ್ಯಾಯರು ಮೇಲಾಧಿಕಾರಿಗಳ ಗಮನಕ್ಕೆ ತಂದು ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ ನಂತರ ಸ್ಥಳೀಯರು ಶಾಂತರಾಗಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಪತ್ರಕರ್ತನ ಪತ್ನಿಗೆ ಲೈಂಗಿಕ ಕಿರುಕುಳ ಪ್ರಕರಣ: ಸ್ವಾಮೀಜಿ ಶಿಷ್ಯನ ಬಂಧನ