Publish Date: Tue, 30 Jun 2020 (18:34 IST)
Updated Date: Tue, 30 Jun 2020 (18:35 IST)
ಹಳೆ ದ್ವೇಷದಿಂದಾಗಿ ವಿದ್ಯಾರ್ಥಿಯೊಬ್ಬನ ಮೇಲೆ ಹಲ್ಲೆ ನಡೆದಿದೆ.
ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ವಿದ್ಯಾರ್ಥಿಯೊಬ್ಬನ ಮೇಲೆ ಹಲ್ಲೆ ನಡೆಸಿ ಗಂಭೀರವಾಗಿ ಗಾಯಗೊಳಿಸಿದ ಘಟನೆ ನಡೆದಿದೆ. ಕಲಬುರ್ಗಿಯ ಜೇವರ್ಗಿ ರಸ್ತೆಯ ಅಂಡರ್ ಬ್ರಿಡ್ಜ್ ಬಳಿ ಘಟನೆ ನಡೆದಿದೆ.
ಡಿಪ್ಲೋಮಾ ಸಿವಿಲ್ ಓದುತ್ತಿದ್ದ ರಾಮನಗರದ ಸಾಗರ (19) ಗಾಯಗೊಂಡ ವಿದ್ಯಾರ್ಥಿಯಾಗಿದ್ದಾನೆ. ಬೈಕ್ ವಿಷಯದಲ್ಲಿ ಕಳೆದ ವರ್ಷ ನಡೆದಿದ್ದ ಗಲಾಟೆಯೇ ಈಗ ಹಲ್ಲೆ ನಡೆಯಲು ಕಾರಣ ಎನ್ನಲಾಗಿದೆ.
ಫೈಹೀಮ್ ಮಿರ್ಜಾ ಎಂಬುವರ ಅಳಿಯ ಮಿಜಾಮಿಲ್ ಎಂಬಾತ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾನೆ ಎಂದು ಗಾಯಗೊಂಡ ವಿದ್ಯಾರ್ಥಿ ದೂರಿನಲ್ಲಿ ತಿಳಿಸಿದ್ದಾನೆ.