Select Your Language

Notifications

webdunia
webdunia
webdunia
webdunia

ಚಂಡಮಾರುತದ ಎಫೆಕ್ಟ್; ರಾಜ್ಯಾದೆಂತ ಭಾರಿ ಮಳೆ ನಿರೀಕ್ಷೆ, ಯೆಲ್ಲೋ ಅಲರ್ಟ್

ಚಂಡಮಾರುತದ ಎಫೆಕ್ಟ್; ರಾಜ್ಯಾದೆಂತ ಭಾರಿ ಮಳೆ ನಿರೀಕ್ಷೆ, ಯೆಲ್ಲೋ ಅಲರ್ಟ್
bangalore , ಮಂಗಳವಾರ, 10 ಮೇ 2022 (20:35 IST)
ಅಸಾನಿ ಚಂಡಮಾರುತ ಪರಿಣಾಮ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಸುರಿಯುತ್ತಿರುವ ಮಳೆ, ಮುಂದಿನ ದಿನಗಳಲ್ಲಿ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
 
ಚಂಡಮಾರುತದ ಪರಿಣಾಮ ಸೋಮವಾರವೂ ಹಲವೆಡೆ ಭರ್ಜರಿ ಮಳೆಯಾಗಿದ್ದು, ಚಾಮರಾಜನಗರದ ಹರದನಹಳ್ಳಿಯಲ್ಲಿ 19 ಮಿಮೀ ಮತ್ತು ಕೊಪ್ಪಳದ ಮುನಿರ್‌ಬಾದ್‌ನಲ್ಲಿ 15 ಮಿಮೀ ಮಳೆ ಸುರಿದಿದೆ ಎಂದು ಹೇಳಿದೆ.
 
ಮೇ 11ರಂದು ರಾಜ್ಯದಲ್ಲಿ ಭಾರಿ ಮಳೆ ಸುರಿಯಲಿರುವ ಹಿನ್ನೆಲೆಯಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಆಂಧ್ರಪ್ರದೇಶದ ವಿಶಾಖಪಟ್ಟಣ, ಓರಿಸ್ಸಾದ ಪುರಿಯತ್ತ ಚಂಡಮಾರುತ ಮಾರುತಗಳು ಚಲಿಸುತ್ತಿದ್ದು, ಮೇ 10 ರಿಂದ ಮೇ 12ರವರೆಗೆ ಈ ಭಾಗಗಳಲ್ಲಿ ಭಾರಿ ಮಳೆ ಬೀಳಲಿದೆ ಎಂದಿದೆ.
 
ಮೀನುಗಾರರಿಗೆ ಎಚ್ಚರಿಕೆ:
 
ಗಂಟೆಗೆ 110-100 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದ್ದು, ಎತ್ತರ ಅಲೆಗಳು ಎಳೆಯುತ್ತಿರುವ ಹಿನ್ನೆಲೆಯಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಅಕ್ಕ ಪಕ್ಕದ ನಿವಾಸಿಗಳು ಎಚ್ಚರಿಕೆಯಿಂದ ಇರುವಂತೆ ಅಲರ್ಟ್ ನೀಡಿದೆ

Share this Story:

Follow Webdunia kannada

ಮುಂದಿನ ಸುದ್ದಿ

ನಗರದಲ್ಲಿ ಮುಂದಿನ 3 ದಿನ ಮುಂದುವರೆಯಲಿರುವ ವರ್ಷಧಾರೆ