Webdunia - Bharat's app for daily news and videos

Install App

ಕಲ್ಲು ಕ್ವಾರಿ ಕುಸಿತ; 8 ಸಾವು

Webdunia
ಮಂಗಳವಾರ, 15 ನವೆಂಬರ್ 2022 (19:21 IST)
ಮಿಜೋರಾಂನಲ್ಲಿ ಸೋಮವಾರ ಕಲ್ಲು ಕ್ವಾರಿಯೊಂದು ಕುಸಿದು ಬಿದ್ದ ಪರಿಣಾಮ ಹಲವು ಕಾರ್ಮಿಕರು ಮಣ್ಣಿನಡಿ ಸಿಲುಕಿಕೊಂಡಿದ್ದರು. ಬಳಿಕ ರಕ್ಷಣಾ ತಂಡ ಕಾರ್ಯಾಚರಣೆ ನಡೆಸಿ, ಮಂಗಳವಾರ ಬಿಹಾರದ 8 ಕಾರ್ಮಿಕರ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಇನ್ನೂ 4 ಕಾರ್ಮಿಕರಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಸೋಮವಾರ ಮಿಜೋರಾಂನ ಹ್ನಾಥಿಯಾಲ್ ಗ್ರಾಮದ ಬಳಿ ಇದ್ದ ಕಲ್ಲು ಕ್ವಾರಿ ಕುಸಿದು ಬಿದ್ದಿದೆ. ಇದರ ಪರಿಣಾಮ 12 ಕಾರ್ಮಿಕರು ಮಣ್ಣಿನಡಿ ಸಿಲುಕಿಕೊಂಡಿದ್ದರು. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಅವರ ಗುರುತು ಪತ್ತೆಹಚ್ಚಲಾಗುತ್ತಿದೆ. ನಾಪತ್ತೆಯಾದವರಿಗಾಗಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಅವರ ಪತ್ತೆಯಾಗುವವರೆಗೂ ಶೋಧ ಮುಂದುವರಿಸಲಾಗುವುದು ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ತಿಳಿಸಿದೆ. ಮೂಲಗಳ ಪ್ರಕಾರ, ಹ್ನಾಥಿಯಾಲ್ ಜಿಲ್ಲೆಯ ಮೌದರ್ಹ್‌ನಲ್ಲಿರುವ ಖಾಸಗಿ ಕಂಪನಿಯ ಕಾರ್ಮಿಕರು ತಮ್ಮ ಊಟದ ವಿರಾಮದ ಬಳಿಕ ಕಲ್ಲು ಕ್ವಾರಿ ಬಳಿಗೆ ಮರಳಿದ್ದರು. ಈ ವೇಳೆ ಏಕಾಏಕಿ ಕಲ್ಲು ಕ್ವಾರಿ ಕುಸಿತಗೊಂಡಿದೆ. ಕಾರ್ಮಿಕರೊಂದಿಗೆ 5 ಹಿಟಾಚಿ ಅಗೆಯುವ ಯಂತ್ರಗಳು ಮತ್ತು ಇತರ ಡ್ರಿಲ್ಲಿಂಗ್ ಯಂತ್ರಗಳು ಮಣ್ಣಿನಡಿ ಹೂತುಹೋಗಿವೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಇನ್ನೊಬ್ಬಳೊಂದಿಗೆ ಸಿಕ್ಕಿಬಿದ್ದ ಪ್ರಿಯಕರ: ಚಕಾರ ಎತ್ತಿದ ಪ್ರೇಯಸಿ ಮೇಲೆಯೇ ಕಾರು ಹರಿಸಿ ಪರಾರಿ Video

ಅಬ್ಬಾ ನಿಜಕ್ಕೂ ಭಯಾನಕ… ಎಕ್ಸ್ ಪ್ರೆಸ್ ರೈಲಿಗೆ ಅಡಿಗೆ ಸಿಲುಕಿದವು ಹತ್ತಾರು ಮೇಕೆಗಳು Video

ಒಂದೇ ಕಪ್ಪು ಚುಕ್ಕೆಯಿಲ್ಲದೇ ದೇಶ ಮುನ್ನಡೆಸುತ್ತಿದ್ದಾರೆ ಮೋದಿ ಜೀ: ವಿಜಯೇಂದ್ರ ಹೊಗಳಿಕೆ

ಗಣೇಶ ಪ್ರತಿಷ್ಠಾಪನೆ ಆಗುವ ಮುನ್ನ ಚಪ್ಪಲಿ ಹಾಕಿಕೊಂಡರೆ ತಪ್ಪಿಲ್ಲ: ಯದುವೀರ್ ಒಡೆಯರ್

ಸ್ನಾನಕ್ಕೆ ಹೋಗ್ತೀನಿ ಎಂದಿದ್ದ 23 ವರ್ಷದ ಯುವತಿ ಹಠಾತ್ ಸಾವು: ಹಾಸನದ ಲಾಡ್ಜ್ನಲ್ಲಿ ನಡೆದಿದ್ದೇನು

ಮುಂದಿನ ಸುದ್ದಿ
Show comments