Select Your Language

Notifications

webdunia
webdunia
webdunia
webdunia

ಭಾರೀ ಮಳೆಗೆ ಬ್ರೆಜಿಲ್ ತತ್ತರ: ಭೂಕುಸಿತದಿಂದ ಕನಿಷ್ಠ 18 ಸಾವು

ಭಾರೀ ಮಳೆಗೆ ಬ್ರೆಜಿಲ್ ತತ್ತರ: ಭೂಕುಸಿತದಿಂದ ಕನಿಷ್ಠ 18 ಸಾವು
bangalore , ಸೋಮವಾರ, 31 ಜನವರಿ 2022 (20:47 IST)
ಭಾರೀ ಮಳೆಗೆ ಬ್ರೆಜಿಲ್ ತತ್ತರಿಸಿದ್ದು, ಭೂಕುಸಿತದಿಂದಾಗಿ ಕನಿಷ್ಠ 18 ಮಂದಿ ಮೃತಪಟ್ಟಿದ್ದಾರೆ.
ಬ್ರೆಜಿಲ್‌ನ ಸಾವೊ ಪಾಲೊ ರಾಜ್ಯದಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಪ್ರವಾಹ ಉಂಟಾಗಿದೆ. ಭೂಕುಸಿತದಿಂದ 18 ಮಂದಿ ಮೃತಪಟ್ಟಿದ್ದಾರೆ ಎಂದು ಗವರ್ನರ್ ಜೊವೊ ಡೋರಿಯಾ ಹೇಳಿದ್ದಾರೆ.
ಭಾರೀ ಮಳೆಯಿಂದಾಗಿ ಹಾನಿಯುಂಟಾಗಿದ್ದು, ನನಗೆ ಅತೀವ ನೋವಾಗಿದೆ. ಈ ಮಳೆಗೆ 18 ಮಂದಿ ಪ್ರಾಣ ಬಿಟ್ಟಿದ್ದಾರೆ. ರಕ್ಷಣಾ ಕಾರ್ಯದಲ್ಲಿ ತೊಡಗಿದ್ದೇವೆ. ಸಂತ್ರಸ್ತರಿಗೆ ನೆರವು ನೀಡಲು ಅಧಿಕಾರಿಗಳಿಗೆ ಸೂಚಿಸಿದ್ದೇವೆ. ಒಟ್ಟಾರೆ 500 ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸಲಾಗಿದೆ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಒಂದೇ ದಿನದಲ್ಲಿ 959 ಜನರು ಮಹಾಮಾರಿಗೆ ಬಲಿ