ಕದ್ದ ಬೈಕ್ ಸಂಬಂಧಿಕರಿಗೆ ಗಿಫ್ಟ್

Webdunia
ಭಾನುವಾರ, 23 ಜನವರಿ 2022 (17:04 IST)
ಕದ್ದ ಬೈಕ್ ಗಳನ್ನೇ ಸಂಬಂಧಿಕರಿಗೆ ಗಿಫ್ಟ್ ಆಗಿ ಕೊಡುತ್ತಿದ್ದ ಖತರ್ನಾಕ್ ಖದೀಮನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಭರತ್ ಬಂಧಿತ ಆರೋಪಿ ಆಗಿದ್ದು, ರಾಜಾಜಿನಗರದ ನಿವಾಸಿ ಎಂದು ಹೇಳಲಾಗಿದೆ. ನಗರದ ವಿವಿಧೆಡೆ ಓಡಾಡಿ ಮನೆ ಮುಂದೆ ನಿಂತಿರುವ ವಾಹನಗಳನ್ನು ಗುರುತಿಸುತ್ತಿದ್ದ.
ವಾಹನಗಳ ನಂಬರ್‌ ಅನ್ನು ತನ್ನ ಮೊಬೈಲ್‌ನಲ್ಲಿ ನೋಂದಾಯಿಸಿಕೊಂಡು ಬೆಂಗಳೂರು ಟ್ರಾಫಿಕ್‌ ಪೊಲೀಸ್‌ ಆಯಪ್‌ ಮೂಲಕ ವಾಹನದ ವಿರುದ್ಧ ಸಂಚಾರಿ ನಿಯಮ ಉಲ್ಲಂಘನೆ ದಂಡ ಬಾಕಿ ಇದೆಯೇ ಎಂದು ಪರಿಶೀಲಿಸುತ್ತಿದ್ದ. ಒಂದು ವೇಳೆ ದಂಡ ವಿಧಿಸಿದ್ದರೆ ಅಂತಹ ವಾಹನಗಳನ್ನು ಕಳವು ಮಾಡುತ್ತಿರಲಿಲ್ಲ. ಯಾವುದೇ ಪ್ರಕರಣಗಳಿಲ್ಲದ ವಾಹನಗಳನ್ನು ಕದಿಯುತ್ತಿದ್ದ. ಕದ್ದ ನಂತರ ಬೈಕ್‌ ಮಾರಿದರೆ ಕಳ್ಳತನ ಮಾಡಿರುವುದು ತಿಳಿಯಬಹುದು ಎಂದು, ಸಂಬಂಧಿಕರಿಗೆ ಉಚಿತವಾಗಿ ನೀಡುತ್ತಿದ್ದ ಎಂಬುದು ವಿಚಾರಣೆಯಲ್ಲಿ ಗೊತ್ತಾಗಿದೆ.ಈ ಹಿನ್ನೆಲೆ ಆರೋಪಿಯನ್ನು ರಾಜಾಜಿನಗರ ಪೊಲೀಸರು ಬಂಧಿಸಿದ್ದು, ಹೆಚ್ಚಿನ ತನಿಖೆಗೆ ಮುಂದಾಗಿದ್ದಾರೆ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಾಹುಲ್ ಗಾಂಧಿಗೆ ನೊಬೆಲ್ ಕೊಡಬೇಕಿತ್ತು: ಕಾಂಗ್ರೆಸ್ ನಾಯಕ ಅಸಮಾಧಾನ

ಮೈಸೂರು ಬಲೂನ್ ಮಾರುತ್ತಿದ್ದ ಬಾಲಕಿಗೆ ಪಾಪಿ ಹೇಗೆಲ್ಲಾ ಹಿಂಸೆ ಮಾಡಿದ್ದ: ಮರಣೋತ್ತರ ಪರೀಕ್ಷೆಯಲ್ಲಿ ಬಯಲು

ರಾಹುಲ್ ಗಾಂಧಿ ಜೊತೆಗೆ ಸಿದ್ದರಾಮಯ್ಯ ಮೊಮ್ಮಗ ಪೋಸ್: ಕನ್ನಡ ಬರೆದುಕೊಟ್ಟಿದ್ದು ಯಾರು ಎಂದ ನೆಟ್ಟಿಗರು

ಶವದ ಮೇಲೆ ರೇಪ್ ಮಾಡಿದ ವಿಕೃತ ಕಾಮಿ: ಶಾಕಿಂಗ್ ವಿಡಿಯೋ ವೈರಲ್

ನೊಬೆಲ್ ಪ್ರಶಸ್ತಿ ತನಗೆ ಸಿಗಲಿಲ್ಲ ಎಂದು ಟ್ರಂಪ್ ಗೆ ಎಷ್ಟು ಹೊಟ್ಟೆ ಉರಿ ನೋಡಿ

ಮುಂದಿನ ಸುದ್ದಿ
Show comments