7 ವರ್ಷದ ಬಾಲಕಿಯನ್ನು ಕೊಚ್ಚಿ ಕೊಂದ ಮಲತಂದೆ, ಕಾರಣ ಕೇಳಿದ್ರೆ ಶಾಕ್‌

Sampriya
ಶನಿವಾರ, 25 ಅಕ್ಟೋಬರ್ 2025 (19:58 IST)
ಬೆಂಗಳೂರು: ಏಳು ವರ್ಷದ ಬಾಲಕಿಯನ್ನು ಆಕೆಯ ಮಲತಂದೆಯೇ ಮನೆಯಲ್ಲೇ ಕೊಚ್ಚಿ ಕೊಲೆಗೈದಿರುವ ಘಟನೆ ಶುಕ್ರವಾರ ಕುಂಬಳಗೋಡಿನಲ್ಲಿ ನಡೆದಿದೆ. ಆರೋಪಿಯನ್ನು ದರ್ಶನ್ (30) ಎಂದು ಗುರುತಿಸಲಾಗಿದ್ದು, ಮಾರುಕಟ್ಟೆಯೊಂದರಲ್ಲಿ ಉದ್ಯೋಗಿಯಾಗಿದ್ದು, ಸದ್ಯ ತಲೆಮರೆಸಿಕೊಂಡಿದ್ದಾನೆ.

ಕೊಲೆಯಾದ ಬಾಲಕಿಯನ್ನು ಸಿರಿ ಎಂದು ಗುರುತಿಸಲಾಗಿದ್ದು, ಈಕೆಯ ತಾಯಿ ಸಿರಿ ಅವರು ಪತಿಯಿಂದ ಬೇರ್ಪಟ್ಟು ಕನ್ನಿಕಾ ಲೇಔಟ್‌ನಲ್ಲಿ ನೆಲೆಸಿದ್ದರು.

ಪೊಲೀಸರ ಪ್ರಕಾರ, ಮಗು ಮನೆಯಲ್ಲಿ ಸೌಜನ್ಯದಿಂದ ವರ್ತಿಸದಿದ್ದಾಕ್ಕಾಗಿ ದರ್ಶನ್ ಆಗಾಗ ಮಗುವನ್ನು ಶಿಕ್ಷಿಸುತ್ತಿದ್ದನ್ನು. 

ಆಕೆಯ ವರ್ತನೆಯಿಂದ ಮನನೊಂದ ಆತ ಆಕೆಯ ಮೇಲೆ ಹಲ್ಲೆ ನಡೆಸಿ ಕೊಚ್ಚಿ ಕೊಲೆ ಮಾಡಿದ್ದ. ಘಟನೆ ನಡೆದಾಗ ಹೊರಾಂಗಣ ವಿನ್ಯಾಸ ಕಂಪನಿ ಕೆಲಸಕ್ಕೆಂದು ಹೊರಗಡೆ ಹೋಗಿದ್ದಾಗ ಈ ಕೃತ್ಯ ನಡೆದಿದೆ. 

ಸಂಜೆ 5.30ರ ಸುಮಾರಿಗೆ ಆಕೆ ಮನೆಗೆ ವಾಪಾಸ್ಸಾಗಿದ್ದು, ಈ ವೇಳೆ ಮಗಳು ಗಂಭೀರ ಗಾಯಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದಳು. ಮಗಳು ಚಲನರಹಿತವಾಗಿ ಬಿದ್ದಿರುವುದನ್ನು ಕಂಡು ಕಿರುಚಾಡಿದ್ದಾಳೆ. 

ಸಾಮಾಜಿಕ ಜಾಲತಾಣದ ಮೂಲಕ ಆರೋಪಿ ದರ್ಶನ್, ಪರಿಚಯವಾಗಿದ್ದಾನೆ. ಈಚೆಗಷ್ಟೇ ಇವರಿಬ್ಬರು ವಿವಾಹವಾಗಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. 

ತುಮಕೂರಿನ ಸ್ವಗ್ರಾಮಕ್ಕೆ ಪರಾರಿಯಾಗಿದ್ದಾನೆ ಎನ್ನಲಾದ ದರ್ಶನ್‌ನನ್ನು ಹಿಡಿಯುವ ಪ್ರಯತ್ನ ನಡೆಯುತ್ತಿದೆ.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ದುಬೈಯಂತಹ ದೇಶ ನಿರ್ಮಿಸಿರುವ ಬಿಹಾರಿಗಳು ಇಂದು ನಿರುದ್ಯೋಗಿಗಳು: ರಾಹುಲ್ ಗಾಂಧಿ

ಮತಕ್ಕಾಗಿ ಮೋದಿ ನೃತ್ಯ ಮಾಡಕ್ಕೂ ಸೈ ಎಂದ ರಾಹುಲ್ ಗಾಂಧಿ ವಿರುದ್ಧ ದೂರು

ಕನ್ನಡ ರಾಜ್ಯೋತ್ಸವ ಪ್ರಶಸ್ತಿ 2025: ವಿಜೇತರ ಪಟ್ಟಿ, ಪ್ರಶಸ್ತಿ ವಿವರ ಇಲ್ಲಿದೆ

ಬಿಹಾರ ವಿಧಾನಸಭೆ ಚುನಾವಣೆ, ನಾಳೆ ಎನ್‌ಡಿಎ ಪ್ರಣಾಳಿಕೆ ಬಿಡುಗಡೆ

ಮಕ್ಕಳು ಸೇರಿದಂತೆ 17ಮಂದಿಯನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದ ಆರ್ಯ ಗುಂಡೇಟಿಗೆ ಬಲಿ

ಮುಂದಿನ ಸುದ್ದಿ
Show comments