Select Your Language

Notifications

webdunia
webdunia
webdunia
webdunia

ಫೆಬ್ರವರಿ 27 - 2 ರಂದು ರಾಜ್ಯಾದ್ಯಂತ ರಾಷ್ಟ್ರೀಯ ಪಲ್ಸ್ ಪೊಲೀಯೋ ಲಸಿಕಾ ಅಭಿಯಾನ

ಫೆಬ್ರವರಿ 27 - 2 ರಂದು ರಾಜ್ಯಾದ್ಯಂತ ರಾಷ್ಟ್ರೀಯ ಪಲ್ಸ್ ಪೊಲೀಯೋ ಲಸಿಕಾ ಅಭಿಯಾನ
bangalore , ಗುರುವಾರ, 24 ಫೆಬ್ರವರಿ 2022 (20:27 IST)
ರಾಜ್ಯಾದ್ಯಂತ ಫೆಬ್ರವರಿ 27 ಮತ್ತು ಮಾರ್ಚ್ 2 ರಂದು ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಅಭಿಯಾನದಡಿ 5 ವರ್ಷದ ಒಳಗಿನ ಎಲ್ಲ ಮಕ್ಕಳಿಗೆ ಲಸಿಕೆ ಹಾಕುವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಆರೋಗ್ಯ ಇಲಾಖೆಯ ನಿರ್ದೇಶನದ ಎಲ್ಲಾ ಜಿಲ್ಲೆ, ತಾಲೂಕು ಹಾಗೂ ಪಂಚಾಯಿತಿ ಮಟ್ಟದಲ್ಲೂ ಎರಡು ಹಂತದ ಪಾಲ್ಸ್ ಪೊಲಿಯೋ ಲಸಿಕೆಯನ್ನು ವಿತರಿಸಲು ಆರೋಗ್ಯ ಇಲಾಖೆ ಸಿದ್ಧತೆ ಮಾಡಿಕೊಂಡಿದೆ.
ಫೆಬ್ರವರಿ 27 ರಂದು ಮತ್ತು ಮಾರ್ಚ್ 2 ರಂದು ಬಸ್ ನಿಲ್ದಾಣ, ರೈಲು ಮತ್ತು ವಿಮಾನ ನಿಲ್ದಾಣಗಳು ಸೇರಿದಂತೆ ಪ್ರಮುಖ ಪ್ರದೇಶಗಳಲ್ಲಿ ಆರೋಗ್ಯ ಕಾರ್ಯಕರ್ತರು, ಆಶಾ ಕಾರ್ಯಕರ್ತೆಯರು ಐದು ವರ್ಷದ ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ ಹಾಕಲಿದ್ದಾರೆ.
ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಪೂರ್ವಭಾವಿ ಸಭೆ ನಡೆಸಿ, ಐದು ವರ್ಷದ ಮಕ್ಕಳಿಗೆ 27 ರಂದು ಜಿಲ್ಲಾ, ತಾಲೂಕು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಜೊತೆಗೆ ಪ್ರಮುಖ ಬೀದಿಗಳಲ್ಲಿಯೂ ಲಸಿಕೆ ಹಾಕಲಾಗಿದೆ. ನಂತರ ಮನೆ-ಮನೆಗೆ ಆರೋಗ್ಯ ಕಾರ್ಯಕರ್ತರು ತೆರಳಿ ಲಸಿಕೆ ಹಾಕುವ ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳುವಂತೆ ನಿರ್ದೇಶನ ನಿರ್ದೇಶನ ಎಂದು ಜಿಲ್ಲೆಗಳಿಂದ ವರದಿ ಮಾಡಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

'ಕೋವಿಡ್ ಪರೀಕ್ಷೆ' ನಿಲ್ಲಿಸಿ : ರಾಜ್ಯ ಸರ್ಕಾರ ಆದೇಶ