Select Your Language

Notifications

webdunia
webdunia
webdunia
webdunia

ಶಾ ವಿರುದ್ಧ ಗೂಂಡಾ ಹೇಳಿಕೆ: ಹುಟ್ಟಿಸಿಕೊಂಡು ಹೇಳಿದ ಮಾತಲ್ಲ ಎಂದು ಸಮರ್ಥಿಸಿದ ಯತೀಂದ್ರ

ಶಾ ವಿರುದ್ಧ ಗೂಂಡಾ ಹೇಳಿಕೆ: ಹುಟ್ಟಿಸಿಕೊಂಡು ಹೇಳಿದ ಮಾತಲ್ಲ ಎಂದು ಸಮರ್ಥಿಸಿದ ಯತೀಂದ್ರ

Sampriya

ಮಡಿಕೇರಿ , ಭಾನುವಾರ, 31 ಮಾರ್ಚ್ 2024 (18:58 IST)
ಮಡಿಕೇರಿ: ಅಮಿತ್‌ ಶಾ ಬಗ್ಗೆ ನಾನು ಹುಟ್ಟಿಸಿಕೊಂಡು ಹೇಳಿದ ಮಾತಲ್ಲ. ಈ ಹಿಂದೆ ಸಿಬಿಐ ಕೂಡ ಹೇಳಿತ್ತು. ಅಮಿತ್ ಶಾ ಅವರಿಗೆ ಕ್ರಿಮಿನಲ್ ಬ್ಯಾಗ್ರೌಂಡ್‌ ಇದೆ ಅಂತ ಹೇಳಿದೆ ಎಂದು ತಮ್ಮ ಹೇಳಿಕೆಯನ್ನು ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದಾರೆ.

ಈಚೆಗೆ ಅಮಿತ್ ಶಾ ಓರ್ವ ಗೂಂಡಾ, ರೌಡಿ ಎಂದು ಹೇಳಿಕೆ ನೀಡಿದ್ದ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು ನೀಡಿತ್ತು. ಅದಲ್ಲದೆ ಯತೀಂದ್ರ ಹೇಳಿಕೆಯನ್ನು ಬಿಜೆಪಿ ಖಂಡಿಸಿತ್ತು.

ಇಂದು ಕೊಡಗಿನ ವಿರಾಜಪೇಟೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಎಂ.ಲಕ್ಷ್ಮಣ್ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದರು.

2010ರಲ್ಲಿ ಸೊಹ್ರಾಬುದ್ದೀನ್ ನಕಲಿ ಎನ್‌ಕೌಂಟರ್‌ ಪ್ರಕರಣದಲ್ಲಿ ಗುಜರಾತ್ ಕೋರ್ಟ್‌ಗೆ ಸಿಬಿಐ ಕೊಟ್ಟ ಹೇಳಿಕೆ ಅದು. ಅದೇ ಹೇಳಿಕೆಯನ್ನು ನಾನು ಪುನರುಚ್ಚರಿಸಿದ್ದೇನೆ ಅಷ್ಟೇ. ನನ್ನ ಹೇಳಿಕೆಯಿಂದ ಬಿಜೆಪಿಗೆ ಕೋಪ ಬಂದಿದ್ದರೇ, ಮೊದಲು ಸಿಬಿಐ ಮೇಲೆ ಅವರು ಕೋಪ ಮಾಡಿಕೊಳ್ಳಬೇಕು. ಈಗಾಗಲೇ ನನಗೆ ಚುನಾವಣಾ ಆಯೋಗ ನೋಟಿಸ್ ಕೊಟ್ಟಿದೆ. ಅದಕ್ಕೆ ನಾನು ಏನು ಉತ್ತರ ಕೊಡಬೇಕೋ ಕೊಡುತ್ತೇನೆ ಎಂದು ತಿಳಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಮುನಿಸು ಮರೆತು ಮಾತುಕತೆ ನಡೆಸಿದ ಕುಮಾರಸ್ವಾಮಿ- ಸುಮಲತಾ: ಬೆಂಬಲ ಕೊಡ್ತಾರಾ ಸಂಸದೆ