ರಾಜ್ಯ ಸರ್ಕಾರ ಕಚೇರಿಗಳ ಕರೆಂಟ್ ಬಿಲ್ ಕಟ್ಟಲೂ ದುಡ್ಡಿಲ್ಲದಷ್ಟು ಪಾಪರ್ ಆಗಿದೆ: ಆರ್‌ ಅಶೋಕ್ ವ್ಯಂಗ್ಯ

Sampriya
ಗುರುವಾರ, 23 ಜನವರಿ 2025 (11:22 IST)
Photo Courtesy X
ಬೆಂಗಳೂರು: ರಾಜ್ಯಾದ್ಯಂತ ಸರ್ಕಾರಿ ಕಚೇರಿಗಳು ವಿವಿಧ ಎಸ್ಕಾಂಗಳಿಗೆ ₹7,467 ಕೋಟಿ ರೂಪಾಯಿ ವಿದ್ಯುತ್ ಬಿಳಿ ಬಾಕಿ ಉಳಿಸಿಕೊಂಡಿದ್ದು, ಸರ್ಕಾರಿ ಕಚೇರಿಗಳ ಕರೆಂಟ್ ಬಿಲ್ ಕಟ್ಟಲೂ ಸಹ ಹಣವಿಲ್ಲದಂತಹ ಶೋಚನೀಯ ಸ್ಥಿತಿಗೆ ಕರ್ನಾಟಕದ ಹಣಕಾಸು ಪರಿಸ್ಥಿತಿಯನ್ನು ಹಾಳುಗೆಡವಿದೆ ಈ ನಾಯಾಲಕ್ ಕಾಂಗ್ರೆಸ್ ಸರ್ಕಾರ ಎಂದು ವಿಪಕ್ಷ ನಾಯಕ ಆರ್‌ ಅಶೋಕ್ ಆಕ್ರೋಶ ಹೊರಹಾಕಿದ್ದಾರೆ.

ಈ ಬಗ್ಗೆ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಾಕಿದ್ದಾರೆ.

ವಿದ್ಯುತ್ ಸಂಪರ್ಕ ಇಲ್ಲದೆ ಹಲವಾರು ಕಡೆಗಳಲ್ಲಿ ಮೊಬೈಲ್ ಟಾರ್ಚು ಬಳಸಿ ಸಿಬ್ಬಂದಿಗಳು ಕೆಲಸ ಮಾಡುವ ಪರಿಸ್ಥಿತಿ ಇದ್ದರೆ, ಅನೇಕ ಕಡೆ ಕಂಪ್ಯೂಟರ್ ಇಲ್ಲದೆ ಅನ್ ಲೈನ್ ಸೇವೆ ನೀಡಲು ಸಾಧ್ಯವಾಗದ ಪರಿಸ್ಥಿತಿ ಇದೆ.

ಸ್ವಾಮಿ ಸಿಎಂ ಸಿದ್ದರಾಮಯ್ಯನವರೇ, ವಿಪಕ್ಷಗಳು ಟೀಕೆ ಮಾಡಿದ ಕೂಡಲೇ ರಾಜ್ಯದ ಹಣಕಾಸು ಪರಿಸ್ಥಿತಿ ಸುಭದ್ರವಾಗಿದೆ ಎಂದು ತಿಪ್ಪೆ ಸರಿಸುವ ಕೆಲಸ ಮಾಡುತ್ತೀರಲ್ಲ, ಎಲ್ಲವೂ ಸರಿ ಇದ್ದಿದ್ದರೆ ಸರ್ಕಾರಿ ಕಚೇರಿಗಳಲ್ಲಿ ಕರೆಂಟ್ ಬಿಲ್ ಪಾವತಿ ಮಾಡಲೂ ಸಾಧ್ಯವಾಗದಷ್ಟು ಅನುದಾನದ ಕೊರತೆ ಯಾಕೆ ಎದುರಾಗಿದೆ? ಸರ್ಕಾರಿ ಕಚೇರಿಗಳು ಎಸ್ಕಾಂಗಳಿಗೆ ₹7,467 ಕೋಟಿ ರೂಪಾಯಿ ವಿದ್ಯುತ್ ಬಿಳಿ ಬಾಕಿ ಏಕೆ ಉಳಿಸಿಕೊಂಡಿದೆ?

ಸಕ್ರಿಯ ರಾಜಕಾರಣದಿಂದ ನಿವೃತ್ತಿ ಹೊಂದುವ ಅಂಚಿನಲ್ಲಿರುವ ತಾವು ಈ ರೀತಿ ದುರಾಡಳಿತದಿಂದ ತಮ್ಮ ಹೆಸರಿಗೆ ತಾವೇ ಯಾಕೆ ಮಸಿ ಬಳಿದುಕೊಳ್ಳುತ್ತಿದ್ದೀರಿ? ರಾಜ್ಯದ ಹಣಕಾಸಿನ ಪರಿಸ್ಥಿತಿ ಬಗ್ಗೆ ಶ್ವೇತ ಪತ್ರ ಹೊರಡಿಸಿ ಸತ್ಯಾಂಶವನ್ನು ಜನರ ಮುಂದಿಡಿ. ತಮ್ಮ ಪ್ರತಿಷ್ಠೆಗಾಗಿ ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನ ಇನ್ನಷ್ಟು ಹಾಳುಗೆಡುವ ಬದಲು ರಾಜೀನಾಮೆ ಕೊಟ್ಟು ಗೌರವದಿಂದ ನಿರ್ಗಮಿಸಿ.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸುಪ್ರೀಂಕೋರ್ಟ್‌ನ 53ನೇ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಕುರಿತ ಇಂಟ್ರಸ್ಟಿಂಗ್‌ ಮಾಹಿತಿ

ಸಿದ್ದರಾಮಯ್ಯ, ಡಿಕೆಶಿ ಕುರ್ಚಿ ಫೈಟ್ ನಡುವೆ ವೈರಲ್ ಆಗ್ತಿದೆ ಯಡಿಯೂರಪ್ಪ ಹಳೇ ವಿಚಾರ

ಅಯೋಧ್ಯೆ ರಾಮ ಮಂದಿರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಐತಿಹಾಸಿಕ ಕಾರ್ಯಕ್ರಮ ನಾಳೆ

ಸಿಎಂ ಸ್ಥಾನ ಬಿಟ್ಟುಕೊಡುವ ಬಗ್ಗೆ ಸಿದ್ದರಾಮಯ್ಯ ಮಹತ್ವದ ಘೋಷಣೆ

ಡಿಕೆ ಶಿವಕುಮಾರ್ ಸಿಎಂ ಸ್ಥಾನ ಕೊಡಬೇಕಾ: ಡಿಕೆಶಿ ಭವಿಷ್ಯದ ಅಂತಿಮ ನಿರ್ಧಾರ ಯಾರದ್ದು ಗೊತ್ತಾ

ಮುಂದಿನ ಸುದ್ದಿ
Show comments