Select Your Language

Notifications

webdunia
webdunia
webdunia
webdunia

ಕಷ್ಟಪಟ್ಟ ಟಿಬಿ ಡ್ಯಾಮ್ ಗೇಟ್ ಅಳವಡಿಸಿದವರಿಗೆ ರಾಜ್ಯ ಸರ್ಕಾರ ದುಡ್ಡೂ ಕೊಟ್ಟಿಲ್ಲ

Tunga Bhadra dam

Krishnaveni K

ಬೆಂಗಳೂರು , ಮಂಗಳವಾರ, 22 ಅಕ್ಟೋಬರ್ 2024 (14:29 IST)
ಬೆಂಗಳೂರು: ಇತ್ತೀಚೆಗೆ ತುಂಗ ಭದ್ರಾ ಡ್ಯಾಮ್ ಗೆ ಹೊಸ ಗೇಟ್ ಅಳವಡಿಸಿದವರಿಗೆ ರಾಜ್ಯ ಸರ್ಕಾರ ದುಡ್ಡೂ ಕೊಡದೇ ಕೈ ತೊಳೆದುಕೊಂಡಿದೆ ಎಂದು ರಾಜ್ಯ ಬಿಜೆಪಿ ಟೀಕಿಸಿದೆ.

ತುಂಗ ಭದ್ರಾ ಡ್ಯಾಮ್ ಗೇಟ್ ಹಾಳಾಗಿದ್ದರಿಂದ ಅಪಾರ ಪ್ರಮಾಣದ ನೀರು ನಷ್ಟವಾಗಿತ್ತು. ಸತತ ಒಂದು ವಾರದ ಪರಿಶ್ರಮದ ನಂತರ ಹೊಸ ಗೇಟ್ ಅಳವಡಿಸಲಾಯಿತು. ಆದರೆ ಡ್ಯಾಮ್ ಗೆ ಗೇಟ್ ನಿರ್ಮಿಸಿದ್ದ ಕನ್ನಯ್ಯ ನಾಯ್ಡು ಮತ್ತು ತಂಡ ಈಗ ಆರ್ಥಿಕ ಸಂಕಷ್ಟದಲ್ಲಿದೆ ಎಂದು ವರದಿಯಾಗಿದೆ.

ಇದರ ಬಗ್ಗೆ ಬಿಜೆಪಿ ರಾಜ್ಯ ಸರ್ಕಾರವನ್ನು ಪ್ರಶ್ನೆ ಮಾಡಿದೆ. ಇದು ಕರ್ನಾಟಕದ ನಿರ್ನಾಮದ ಭೋಗಸ್ ಗ್ಯಾರಂಟಿ ಸರ್ಕಾರದ ದಿವಾಳಿ ಮಾಡೆಲ್. ಟಿಬಿ ಡ್ಯಾಮ್ ಗೆ ಗೇಟ್ ಅಳವಡಿಸಿದವರಿಗೆ ಕಾಸು ಕೊಡದೇ ‘ಕೈ’ ಕೊಟ್ಟಿದೆ ಕಾಂಗ್ರೆಸ್ ಸರ್ಕಾರ ಎಂದು ಟ್ವೀಟ್ ಮೂಲಕ ಬಿಜೆಪಿ ಟೀಕೆ ಮಾಡಿದೆ.

ಸೋರುತ್ತಿದ್ದ ಬಹಳಷ್ಟು ಟಿಎಂಸಿ ನೀರನ್ನು ತಮ್ಮ ಜೀವವನ್ನು ಪಣಕ್ಕಿಟ್ಟು ತಡೆದ ಜಲಾಶಯ ತಜ್ಞ ಕನ್ನಯ್ಯ ಕುಮಾರ್ ತಂಡಕ್ಕೆ ರಾಜ್ಯ ಸರ್ಕಾರ ಇದುವರೆಗೆ ಬಾಕಿ ಹಣ ಪಾವತಿಸಿಲ್ಲ. ಸಿಎಂ ಸಿದ್ದರಾಮಯ್ಯನವರೇ, ಡಿಸಿಎಂ ಡಿಕೆ ಶಿವಕುಮಾರ್ ಅವರೇ, ತುಂಗಭದ್ರಾ ಡ್ಯಾಮ್ ಗೆ ಬಾಗಿನ ಅರ್ಪಿಸಿ ಫೋಟೋ ಶೂಟ್ ಮಾಡಿಸಿಕೊಂಡ ನೀವು ಕನ್ನಯ್ಯಕುಮಾರ್ ಮತ್ತು ತಂಡಕ್ಕೆ ಬಾಕಿ ಹಣ ಪಾವತಿಸದೇ ಉಳಿಸಿಕೊಂಡಿರುವುದು ಸರ್ಕಾರ ದಿವಾಳಿಯಾಗಿದೆ ಎಂಬುದರ ಸೂಚಕವೇ ಎಂದು ಬಿಜೆಪಿ ಪ್ರಶ್ನೆ ಮಾಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

14 ಲಕ್ಷ ಬಿಪಿಎಲ್ ಕಾರ್ಡ್ ಅನರ್ಹರ ಪಟ್ಟಿಗೆ: ಅರ್ಹತೆಯಿದ್ದರೂ ಕಾರ್ಡ್ ರದ್ದಾಗಿದ್ದರೆ ಹೀಗೆ ಮಾಡಿ