ದಶಕದ ಗ್ಯಾಪ್ ಬಳಿಕ ಚಿತ್ರರಂಗಕ್ಕೆ ಮರಳಿರೋ ರಾಘವೇಂದ್ರ ರಾಜಕುಮಾರ್ ಅವರು ಅತ್ಯುತ್ತಮ ನಟ ಪ್ರಶಸ್ತಿಗೆ ಭಾಜನರಾಗಿದ್ದರೆ, ನಟಿ ಮೇಘನಾ ರಾಜ್ ಗೆ ಅತ್ಯುತ್ತಮ ನಟಿ ಪ್ರಶಸ್ತಿ ಒಲಿದಿದೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು 2018 ನೇ ವರ್ಷದ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಘೋಷಣೆ ಮಾಡಿದ್ದಾರೆ.
ಅತ್ಯುತ್ತಮ ಚಿತ್ರವಾಗಿ ಆ ಕರಾಳ ರಾತ್ರಿ, ಪಿ.ಶೇಷಾದ್ರಿಗೆ ಪುಟ್ಟಣ್ಣ ಕಣಗಾಲ್, ಶ್ರೀನಿವಾಸಮೂರ್ತಿಗೆ ಜೀವಮಾನ ಸಾಧನೆಗಾಗಿ ಡಾ.ರಾಜ್ ಕುಮಾರ ಪ್ರಶಸ್ತಿ ಹಾಗೂ ಬಿ.ಎಸ್.ಬಸವರಾಜು ಅವರಿಗೆ ವಿಷ್ಣುವರ್ಧನ್ ಪ್ರಶಸ್ತಿ ಗೌರವ ಸಂದಿದೆ. ವಿವಿಧ ಚಿತ್ರಗಳ ಸಾಧಕರ ಹೆಸರನ್ನು ಸಿಎಂ ಘೋಷಣೆ ಮಾಡಿದ್ದಾರೆ.