Publish Date: Thu, 23 Feb 2017 (12:01 IST)
Updated Date: Thu, 23 Feb 2017 (12:11 IST)
ಮಾರ್ಚ್ 15ಕ್ಕೆ ರಾಜ್ಯ ಬಜೆಟ್ ಮಂಡನೆಯಾಗಲಿದೆ. ಮಾರ್ಚ್ 15 ರಿಂದ ಮಾರ್ಚ್ 28ರ ವರಗೆ ಬಜೆಟ್ ಅಧಿವೇಶನ ನಡೆಯಲಿದ್ದು, ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್‌ನ್ನು ಮಂಡಿಸಲಿದ್ದಾರೆ.
ವಿಧಾನಸಭಾ ಚುನಾವಣೆಗೆ ಒಂದು ವರ್ಷ ಬಾಕಿ ಇರುವ ಹಿನ್ನೆಲೆಯಲ್ಲಿ ಮತದಾರರನ್ನು ಗಮನದಲ್ಲಿಟ್ಟುಕೊಂಡು ಬಜೆಟ್ ಸಿದ್ಧಪಡಿಸಿರುವ ಸಾಧ್ಯತೆಗಳಿವೆ. ರೈತರ ಸಾಲ ಮನ್ನಾ ಕೂಡ ಬಜೆಟ್‌ನಲ್ಲಿ ಪ್ರಸ್ತಾಪಿತವಾಗುವ ಸೂಚನೆಗಳಿದ್ದು, ಇದು ಸತ್ಯವಾದರೆ ಬರದಿಂದ ದಿಕ್ಕೆಟ್ಟಿರುವ ರೈತರು ಸ್ವಲ್ಪ ಮಟ್ಟಿಗೆ ನಿರಾಳರಾಗಲಿದ್ದಾರೆ.
ಸಿದ್ದರಾಮಯ್ಯನವರು ಮಂಡಿಸುತ್ತಿರುವ 12ನೇ ಬಜೆಟ್ ಇದಾಗಿದೆ.